ಬಂಟ್ವಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 20 ಕೋಟಿ ಮಂಜೂರು; ಬಿ.ರಮಾನಾಥ ರೈ

Spread the love

ಬಂಟ್ವಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 20 ಕೋಟಿ ಮಂಜೂರು; ಬಿ.ರಮಾನಾಥ ರೈ

ಮ0ಗಳೂರು : 2016-17ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಶೀರ್ಷಿಕೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕಾಗಿ ರೂ.20 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕು ಕಲ್ಲಡ್ಕ ವೀರಕಂಭ ರಾಜ್ಯ ಹೆದ್ದಾರಿ ದ್ವಿಪಥಗೊಳಿಸಲು ರೂ.3.00 ಕೋಟಿ, ಕೋಡಪದವು ಎಂಬಲ್ಲಿ ರಸ್ತೆ ಅಗಲೀಕರಣಗೊಳಿಸಲು ರೂ.1.00ಕೋಟಿ, ಬೈರಿಕಟ್ಟೆ – ಕನ್ಯಾನ ರಾಜ್ಯ ಹೆದ್ದಾರಿ ನವೀಕರಣಕ್ಕೆ ರೂ.1.50 ಕೋಟಿ, ಕಾರಿಂಜ ಕ್ರಾಸ್ ಪಚ್ಚಾಜೆ –ಕೊಳೆಂಜಿ ಕೋಡಿ ಮತ್ತು ವಗ್ಗ – ಅಲ್ಲಿಪಾದೆ ರಸ್ತೆ ಅಭಿವೃದ್ಧಿಗೆ ರೂ.2.75 ಕೋಟಿ, ಮಜ್ಜೋಣಿ – ಮಾದಕಟ್ಟೆ – ಮದಕ – ಕರೈ ರಸ್ತೆ ಅಭಿವೃದ್ಧಿಗೆ ರೂ.2 ಕೋಟಿ, ಅನಂತಾಡಿ – ಮಂಗಿಲಪದವು ರಸ್ತೆ ಅಭಿವೃದ್ಧಿಗೆ ರೂ.95.00ಲಕ್ಷ, ವಗ್ಗ – ವಾಮದಪದವು ರಸ್ತೆ ಅಭಿವೃದ್ಧಿಗೆ ರೂ.95.00ಲಕ್ಷ, ಬೇಡಗುಡ್ಡೆ – ಸುಂಕದಕಟ್ಟೆ – ಆನೆಕಲ್ಲು ರಸ್ತೆ ಅಭಿವೃಧ್ಧಿಗೆ ರೂ.95.00 ಲಕ್ಷ, ಪೆರಾಜೆ ಗ್ರಾಮದ ಬುಡೋಳಿ ಪೇಟೆ ಶೇರಾ ಶಾಲೆ – ಬನಾರಿ ರಸ್ತೆ ಅಭಿವೃದ್ಧಿಗೆ ರೂ.90.00 ಲಕ್ಷ. ಅಮ್ಟಾಡಿ–ಕುರಿಯಾಳ ರಸ್ತೆ ಅಭಿವೃದ್ಧಿಗೆ ರೂ.80.00ಲಕ್ಷ, ಕೈಕಂಬ-ಪರ್ಲಿಯ ರಸ್ತೆ ಅಭಿವೃದ್ಧಿಗೆ ರೂ.50.00ಲಕ್ಷ, ಕಾವಳಕಟ್ಟೆ-ಬಂಗೇರಕೆರೆ–ರಾಮೊಟ್ಟು ರಸ್ತೆ ಅಭಿವೃದ್ಧಿಗೆ ರೂ.25.00ಲಕ್ಷ, ಇರ್ನಿ – ಅಣ್ಣಳಿಕೆ ರಸ್ತೆ ಅಭಿವೃದ್ಧಿಗೆ ರೂ.20.00ಲಕ್ಷ, ಅಮ್ಟೂರು – ಕೇಶವನಗರ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ರೂ.1.50ಕೋಟಿ, ಪಾಣೆಮಂಗಳೂರು ಪಾತೂರು ರಸ್ತೆ ನವೀಕರಣ ಹಾಗೂ ಕಿರು ಸೇತುವೆ ಕಾಮಗಾರಿಗೆ ರೂ.85.00ಲಕ್ಷ, ರಾಯಿ ಗ್ರಾಮದ ಹೊರಂಗಳ ಮಹಾಲಿಂಗೇಶ್ವರ ದೇವಸ್ಥಾನ ಕೂಡು ರಸ್ತೆಗೆ ಪಾಂಚಕೋಡಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ರೂ.30.00ಲಕ್ಷ, ಕಲ್ಲಗುಡ್ಡೆ – ಕಮ್ಮಾಜೆ – ಕಾವೇಶ್ವರ – ಪಡೀಲುಬೈಲು ರಸ್ತೆಗೆ ಕಾವೇಶ್ವರ ದೇವಸ್ಥಾನ ಬಳಿ ಸೇತುವೆ ನಿರ್ಮಾಣಕ್ಕೆ ರೂ.25.00ಲಕ್ಷ, ಮಂಚಿ ಗ್ರಾಮದ ಮಿತ್ತಲ ಕ್ರಾಸ್, ಪಂಜಳ – ಕಜೆ ರಸ್ತೆಗೆ ಪಂಜಳ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ರೂ.15.00ಲಕ್ಷ, ಸಾಲೆತ್ತೂರು – ಪಡೆಕುಂಜ ರಸ್ತೆಯ ಬದಿ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ರೂ.40.00ಲಕ್ಷ, ಹಾಗೂ ಮಂಚಿ ಕೋಕಳ – ಕಲ್ಕಾರು ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ರೂ.80.00ಲಕ್ಷ ಅನುದಾನ ಮಂಜೂರಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


Spread the love