ಮಂಗಳೂರು: ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಖಾಯಂ ಆಧಾರ್ ನೋಂದಣಿ ಕೇಂದ್ರ

Spread the love

ಮಂಗಳೂರು: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶಿಷ್ಟ ಗುರುತಿನ ಚೀಟಿ-ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯ 17 ಅಟಲ್ ಜನಸ್ನೇಹಿ ಕೇಂದ್ರಗಳು ಅಂದರೆ ನಾಡ ಕಚೇರಿಗಳಲ್ಲಿ ಖಾಯಂ ಆಧಾರ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಮಂಗಳೂರು ಒನ್ ಕೇಂದ್ರಗಳಾದ ಮಂಗಳೂರು ಮಹಾನಗರಪಾಲಿಕೆ ಕಟ್ಟಡ,ಬಾವುಟಗುಡ್ಡೆ ಕೆ.ಎಸ್.ರಾವ್ ಟ್ರಸ್ಟ್ ಕಟ್ಟಡ,ಮಹಾನಗರಪಾಲಿಕೆ ಕಟ್ಟಡ ಕದ್ರಿ,ಮಹಾನಗರ ಪಾಲಿಕೆ ಕಟ್ಟಡ ಸುರತ್ಕಲ್ ಕೇಂದ್ರಗಳಲ್ಲಿ ಆಧಾರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಂಗಳೂರು ವನ್ ಕೇಂದ್ರಗಳಲ್ಲಿ ದಿನವೊಂದಕ್ಕೆ ತಲಾ 40 ರಿಂದ 45 ಜನರು ಆಧಾರ್ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ.

ಅಲ್ಲದೆ ಮೆಸರ್ಸ್ ಶ್ರೀ ಲಿಮಿಟೆಡ್ ಸಂಸ್ಥೆಯ ವತಿಯಿಂದ ಕದ್ರಿಯಲ್ಲಿರುವ ಮಂಗಳೂರು ಮಹಾನಗರಪಾಲಿಕೆ ಕಟ್ಟಡದ ನೆಲ ಅಂತಸ್ತಿನಲ್ಲಿ 3 ಆಧಾರ್ ನೋಂದಣಿ ಕಿಟ್ಗಳನ್ನು,ಬಂಟ್ವಾಳ ಐ.ಬಿ.ಯಲ್ಲಿ 2 ಆಧಾರ್ ನೋಂದಣಿ ,ಪುತ್ತೂರಿನ ಪುರಭವನ ಕಟ್ಟಡದಲ್ಲಿ 2 ಆಧಾರ್ ನೋಂದಣಿ ಹಾಗೂ ಸುಳ್ಯ ನಗರ ಪಂಚಾಯತ್ ಕಟ್ಟಡದಲ್ಲಿ 1 ಆಧಾರ್ ನೋಂದಣಿ ಕಿಟ್ಗಳನ್ನು ಅಳವಡಿಸಿ ಆಧಾರ್ ನೋಂದಣಿ ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ.

ಸಾರ್ವಜನಿಕರು ಯಾವುದೇ ನೂಕು ನುಗ್ಗಲಿಕೆಗೆ ಅವಕಾಶ ನೀಡದೇ ಈ ಕೇಂದ್ರಗಳ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.ಆಧಾರ್ ನೋಂದಣಿಯು ಸಂಪೂರ್ಣ ಉಚಿತವಾಗಿರುತ್ತದೆ. ಆದ್ದರಿಂದ ಆಧಾರ್ ನೋಂದಣಿ ಮಾಡಿಸಲು ಟೋಕನ್ ಪಡೆಯುವರೇ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಒಮ್ಮೆ ಆಧಾರ್ ನೋಂದಣಿ ಮಾಡಿಸಿಕೊಂಡವರು ಆಧಾರ್ ಕಾರ್ಡ್ ಅವರಿಗೆ ಲಭ್ಯವಾಗದ ಪಕ್ಷದಲ್ಲಿ ಮತ್ತೊಮ್ಮೆ ಆಧಾರ್ ನೋಂದಣಿ ಮಾಡುವಂತಿಲ್ಲ.ಒಮ್ಮೆ ಆಧಾರ್ ನೋಂದಣಿ ಮಾಡಿದ ಮೇಲೆ ಬಯೋಮೆಟ್ರಿಕ್ ಸೇವ್ ಆಗುವುದರಿಂದ ಪುನ: ಆಧಾರ್ ನೋಂದಣಿ ಮಾಡಲು ಅವಕಾಶವಿಲ್ಲ. ಬದಲಾಗಿ ವೆಬ್ಸೈಟ್ http:/ /resident.uidal.net.in/check-aadhaar-status  ನ್ನು ಪರಿಶೀಲಿಸಿ ರಿಜೆಕ್ಟ್ ಅಂತ ಇದ್ದಲ್ಲಿ ಮಾತ್ರ ಪುನ: ಆದಾರ್ ನೋದಣಿ ಮಾಡಿಸಬಹುದಾಗಿದೆ. ಆಧಾರ್ ನೋಂದಣಿ ಜನರೇಟ್ ಆಗಿದ್ದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ 080-44554499 ಅಥವಾ ಉಚಿತ ಕರೆ 1800 300 1947 ಕ್ಕೆ ಕರೆಮಾಡಬಹುದು. ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಾರ್ವಜನಿಕರು ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಮೆಸರ್ಸ್ ಶ್ರೀ ಲಿಮಿಟೆಡ್ ಇವರ ನಂಬ್ರ 08105878578 ಕರೆ ಮಾಡಬಹುದೆಂದು ಪ್ರಕಟಣೆ ತಿಳಿಸಿದೆ.


Spread the love