52 ವರ್ಷ ಪ್ರಾಯದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

52 ವರ್ಷ ಪ್ರಾಯದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: 52 ವರ್ಷ ಪ್ರಾಯದ ವ್ಯಕ್ತಿಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಗುರುಪುರ ರೋಸಾಮಿಸ್ತಿಕಾ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಮೃತರನ್ನು ನಾಗೋರಿ ನಿವಾಸಿ ಮೆಲ್ವಿನ್ ಡಿ’ಸೋಜಾ ಎಂದು ಗುರುತಿಸಲಾಗಿದೆ.

Melwyn-Dsouza-die-20160822

ಮೃತ ಮೆಲ್ವಿನ್ ಅವರ ಪತ್ನಿ ಮರ್ಲಿನ್ ಪ್ರಕಾರ ಅಗೋಸ್ತ್ 21 ರಂದ ಮಧ್ಯಾಹ್ನದ ವೇಳೆ ಮೇಲ್ವಿನ್ ತನ್ನ ಕೆಲವು ಬಟ್ಟೆಗಳೊಂದಿಗೆ ಮನೆಯಿಂದ ತೆರಳಿದ್ದು, ಮನೆಯಿಂದ ತೆರಳುವಾಗಿ ಕೆಲಸದ ನಿಮಿತ್ತ ಒಂದು ವಾರ ಹೊರಹೋಗುವುದಾಗಿ ತಿಳಿಸಿದ್ದರು. ತನಗೆ ಯಾವುದೇ ರೀತಿಯಲ್ಲಿ ಫೋನ್ ಮಾಡಬಾರದಾಗಿ ಹೇಳಿದ್ದರು. ಮರ್ಲಿನ್ ಕೂಡ ಮುಂಬೈನಲ್ಲಿರುವ ಮಗಳನ್ನು ಭೇಟಿ ಮಾಡಲು ತೆರಳಿದ್ದು, ಅಗೋಸ್ತ್ 21 ರಂದೇ ಬೆಳಿಗ್ಗೆ ಮನೆಗೆ ವಾಪಾಸ್ಸಾಗಿದ್ದರು.

ಮನೆಯಿಂದ ತೆರಳುವಾಗ ಮೆಲ್ವಿನ್ ಬೇರೆಯದೇ ಬಟ್ಟೆ ಧರಿಸಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಾಗಿರಲಿಲ್ಲ ಎನ್ನುತ್ತಾರೆ.

ಪೋಲಿಸ್ ಮೂಲಗಳ ಪ್ರಕಾರ ಶವ ಕಾಡಿನ ಪ್ರದೇಶದ ಮರದ ಗೆಲ್ಲಿನಲ್ಲಿ ನೇತಾಡುತ್ತಿದ್ದು, ಸಾವಿನ ನಿಜವಾದ ಕಾರಣ ಶವ ಪರೀಕ್ಷೆಯ ಬಳಿಕವಷ್ಟೇ ತಿಳಿಯಲಿದೆ. ಡೆತ್ ನೋಟ್ ಒಂದನ್ನು ಘಟನಾ ಸ್ಥಳದಲ್ಲಿ ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಬಜ್ಪೆ ಪೋಲಿಸರು ಸ್ಥಳಕ್ಕೆ ತೆರಳಿ, ದೇಹವನ್ನು ಪೋಸ್ಟ್ ಮಾರ್ಟಮ್ ಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply