ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಶ್ರೀ ಮೋಹನ್ ರಾಜ್ ಎನ್ ಅವರಿಗೆ ಸನ್ಮಾನಿಸಲಾಯಿತು

Spread the love

ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಶ್ರೀ ಮೋಹನ್ ರಾಜ್ ಎನ್ ಅವರಿಗೆ ಸನ್ಮಾನಿಸಲಾಯಿತು

44ನೇ ಬಂದರು ವಾರ್ಡಿನಲ್ಲಿ ನಾಮ ನಿರ್ದೇಶಿತ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಐ. ರಾಮದಾಸ್ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಕ್ರೀಡಾಪಟು, ಇತ್ತೀಚೆಗೆ ದುಬಾಯಿಯಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕವನ್ನು ಪಡೆದ ಶ್ರೀ ಮೋಹನ್ ರಾಜ್ ಎನ್. ಇವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಜೆ. ಆರ್. ಲೋಬೊ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಮೋಹನ್ ರಾಜ್ ರವರ ಸಾಧನೆಯನ್ನು ಶ್ಲಾಘಿಸಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಆರ್ಥಿಕವಾಗಿ ಹಿಂದುಳಿದ ಇವರಿಗೆ ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಮ್ಮ ಪರವಾಗಿ ಕೈಲಾದಷ್ಟು ನೆರವನ್ನು ನೀಡಲಾಗುವುದು ಹಾಗೂ ಸರಕಾರ ಹಾಗೂ ದಾನಿಗಳಿಂದ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶ್ವಾಸ್ ದಾಸ್, ವಾರ್ಡು ಅಧ್ಯಕ್ಷರಾದ ಡಿ.ಎಂ. ಮುಸ್ತಫಾ, ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಲಾ ಗಟ್ಟಿ, ಟಿ.ಕೆ. ಸುಧೀರ್, ವಾರ್ಡು ಅಧ್ಯಕ್ಷರಾದ ನಿರಂಜನ್, ಸಮರ್ಥ ಭಟ್, ಸುರೇಂದ್ರ ಶೆಣೈ, ವೆಂಕಟೇಶ್, ವಿಘ್ನೇಶ್ ಮುಂತಾದವರು ಉಪಸ್ಥಿತರಿದ್ದರು.


Spread the love