ಅಂತರ್ ಕಾಲೇಜು ಮಹಿಳೆಯರ ಖೋ-ಖೋ: ಆಳ್ವಾಸ್‍ಗೆ ಸತತ 10ನೇ ಬಾರಿ ಪ್ರಶಸ್ತಿ

Spread the love

ಅಂತರ್ ಕಾಲೇಜು ಮಹಿಳೆಯರ ಖೋ-ಖೋ: ಆಳ್ವಾಸ್‍ಗೆ ಸತತ 10ನೇ ಬಾರಿ ಪ್ರಶಸ್ತಿ

 

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ಖೋ-ಖೋ ಪಂದ್ಯಾವಳಿಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಸತತ 10ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ.

ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಂತರ ವಿ.ವಿ.ಮಹಿಳಾ ಖೋ-ಖೋ ಪಂದ್ಯಾವಳಿಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡವು ಫೈನಲ್‍ನಲ್ಲಿ ಆಳ್ವಾಸ್ ಬಿ.ಪಿ.ಎಡ್ ಕಾಲೇಜು ತಂಡವನ್ನು ಸೋಲಿಸಿ ಈ ಪ್ರಶಸ್ತಿ  ಪಡೆದುಕೊಂಡಿದೆ. ಆಳ್ವಾಸ್ ಬಿ.ಪಿ.ಎಡ್ ಕಾಲೇಜು ತಂಡವು ಮೂರನೇ ಬಾರಿ ದ್ವಿತೀಯ ಸ್ಥಾನಿಯಾಗಿರುತ್ತದೆ. ಆಳ್ವಾಸ್‍ನ ಸುಧಾ ಎಸ್ ಉತ್ತಮ ಓಟಗಾರ್ತಿಯಾಗಿ ಹಾಗೂ ಬಿ.ಪಿ.ಎಡ್‍ನ ದೀಕ್ಷಾ ಸರ್ವೋತ್ತಮ ಆಟಗಾರ್ತಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ  ಅಭಿನಂದಿಸಿದ್ದಾರೆ.


Spread the love