ಅಕ್ರಮ ಜೂಜಾಟ ಚಟುವಟಿಕೆ ನಡೆಯುತ್ತಿದ್ದರೆ ಮಾಹಿತಿ ನೀಡಿ – ಪೊಲೀಸ್ ಕಮೀಷನರ್

Spread the love

ಅಕ್ರಮ ಜೂಜಾಟ ಚಟುವಟಿಕೆ ನಡೆಯುತ್ತಿದ್ದರೆ ಮಾಹಿತಿ ನೀಡಿ – ಪೊಲೀಸ್ ಕಮೀಷನರ್

ಮಂಗಳೂರು: ನಗರದಲ್ಲಿ ಯಾವುದೇ ರೀತಿಯ ಅಕ್ರಮ ಜೂಜಾಟ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವವರ ಬಗೆಗಿನ ಮಾಹಿತಿಯನ್ನು ನೀಡುವಂತೆ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸಾರ್ವಜನಿಕರಲ್ಲಿ ಕೋರಿದ್ದಾರೆ

ಮಂಗಳೂರು ನಗರದಲ್ಲಿ ಯಾವುದೇ ರೀತಿಯ ಅಕ್ರಮ ಜೂಜಾಟ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಅದರ ಮಾಹಿತಿಯನ್ನು ಅರುಣಾಂಶುಗಿರಿ , ಐ.ಪಿ.ಎಸ್, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ. ಮೊಬೈಲ್ ನಂ: 9480802304 ವಿನಯ್ ಏ. ಗಾಂವ್ಕರ್, ಡಿ.ಸಿ.ಪಿ. ಅಪರಾಧ ಮತ್ತು ಸಂಚಾರ, ಮೊಬೈಲ್ ನಂ: 9480802305 ಮತ್ತು ನಗರ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ್ ನಂ: 9480802312, ದೂರವಾಣಿ ಸಂ: 0824-2220800 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರನ್ನು ಕೋರಿದ್ದಾರೆ.


Spread the love