ಬ್ರಹ್ಮಾವರ: ಮಠತೋಟ ಗೆಳೆಯರಿಂದ ಎಸ್.ಎಸ್.ಎಲ್.ಸಿ ಟಾಪರ್ ನಯನಾ ಗೆ ಸನ್ಮಾನ

Spread the love

ಬ್ರಹ್ಮಾವರ: ಮಠತೋಟ ಗೆಳೆಯರಿಂದ ಎಸ್.ಎಸ್.ಎಲ್.ಸಿ ಟಾಪರ್ ನಯನಾ ಗೆ ಸನ್ಮಾನ

ಬ್ರಹ್ಮಾವರ: ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದಾಗ ಅವರಿಗೆ ಇನ್ನಷ್ಟು ಸಾಧನೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಉದ್ಯಮಿ ಸಮಾಜ ಸೇವಕ ನಾಗೇಶ್ ಪೈ ಹೇಳಿದರು.

ಅವರು ಭಾನುವಾರ ಪಾಂಡೇಶ್ವರ ಮಠತೋಟ ಗೆಳೆಯರ ಬಳಗದಿಂದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 625ಕ್ಕೆ 610 ಅಂಕಗಳನ್ನು ಪಡೆದು ಜಿಲ್ಲೆಗೆ 6 ನೇ ಸ್ಥಾನ ಪಡೆದ ಚೇತನಾ ಪ್ರೌಢ ಶಾಲೆ ಮಾಬುಕಳ ಇದರ ವಿದ್ಯಾರ್ಥಿನಿ ನಯನಾ ಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆ ಮಾಡಿದಾಗ ಅದನ್ನು ಗುರುತಿಸುವ ಕೆಲಸ ನಡೆಯಬೇಕು ಇದರಿಂದ ಬೇರೆ ಮಕ್ಕಳಿಗೂ ಮಾದರಿ ಆಗಲು ಸಾಧ್ಯ. ಸಾಧನೆ ತೋರಿದವರು ಕೇವಲ ಒಮ್ಮೆಗೆ ಸಾಧನೆ ಮಾಡಿ ಕೈಬಿಡದೆ ಮುಂದೆಯೂ ಹೆಚ್ಚು ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚೇತನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಜಿ ಅವರು ಮಾತನಾಡಿ ಶಾಲೆಯ ಶಿಕ್ಷಕರ ಪ್ರೋತ್ಸಾಹದೊಂದಿಗೆ ವಿದ್ಯಾರ್ಥಿಗಳ ಅವಿರತ ಪ್ರಯತ್ನ ಉತ್ತಮ ಸಾಧನೆಗೆ ಸಹಕಾರಿಯಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಹವ್ಯಾಸಿ ಪತ್ರಕರ್ತ ಮಂಜುನಾಥ್ ಚಡಗ ಮಾತನಾಡಿ ಪ್ರತಿಭೆಗಳನ್ನು ಗುರುತಿಸುವ ಕಾರ್ಯವೈಖರಿ ಶ್ಲಾಘನಾರ್ಹವಾಗಿದೆ ಈ ಮೂಲಕ ನಮ್ಮೊಡನೆ ಇರುವ ಪ್ರತಿಭೆಗಳನ್ನು ಬೆಳಕಿಗೆ ತರಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಠತೋಟ ಗೆಳೆಯರ ಬಳಗದ ಮಂಜುನಾಥ ಪೂಜಾರಿ, ಹಿರಿಯ ಸದಸ್ಯರುಗಳಾದ ಗೋವಿಂದ ಪೂಜಾರಿ, ಶಂಭು ಪೂಜಾರಿ, ಸಂಜೀವ ಶೆಟ್ಟಿಗಾರ್ ಹಾಗೂ ಇತರರು ಉಪಸ್ಥಿತರಿದ್ದರು.

ರಕ್ಷಿತಾ ಪ್ರಾರ್ಥಿಸಿ, ಸಂದೇಶ್ ನಯನಾಳ ಪರಿಚಯ ಮಾಡಿದರು. ಸಂಜೀವ ಶೆಟ್ಟಿಗಾರ್ ಧನ್ಯವಾದವಿತ್ತರು


Spread the love