ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ

Spread the love

ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ

ಸುಳ್ಯ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸುಳ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತರನ್ನು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ರಾಧಾಕೃಷ್ಣ (32), ಮುದ್ದ (60) ಎಂದು ಗುರುತಿಸಲಾಗಿದೆ.

ಸೋಮವಾರ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮದ ನಾರ್ಕೋಡು ಜಂಕ್ಷನ್ ಎಂಬಲ್ಲಿ ಮೇಲಿನ ಆರೋಪಿಗಳು ಅಕ್ರಮವಾಗಿ ಮದ್ಯವನ್ನು ಯಾವುದೇ ಪರವಾನಗಿ ಇಲ್ಲದೆ ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದುದಾರರು ತನ್ನ ಸಿಬ್ಬಂದಿಗಳು ಹಾಗೂ ಪಂಚ ರೊಂದಿಗೆ ತೆರಳಿ ಅಕ್ರಮವಾಗಿ ಮದ್ಯ ಮಾರಾಟ ಮಾರಾಟ ಮಾಡುತ್ತಿದ್ದ ಮೇಲಿನ ಆಪಾದಿತರನ್ನು ವಶಕ್ಕೆ ಪಡೆದು ಅವರುಗಳ ಬಳಿಯಿಂದ 44 ಸ್ಯಾಚೆಟ್ ಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿದ್ದು, ಸ್ಯಾಚೆಟ್ ಗಳ ಒಟ್ಟು ಮೌಲ್ಯ 2153 /- ರೂ ಆಗಬಹುದು


Spread the love