ಅಖಿಲ ಭಾರತ ಚಾಲಕರ ಸಂಘ ಉದ್ಘಾಟನೆ

Spread the love

ಅಖಿಲ ಭಾರತ ಚಾಲಕರ ಸಂಘ ಉದ್ಘಾಟನೆ
ಮಂಗಳೂರು: ಅಖಿಲ ಭಾರತ ಚಾಲಕರ ಸಂಘ ಇದರ ಉದ್ಘಾಟನೆಯನ್ನು ಮಂಗಳೂರಿನ ಉಪಸಾರಿಗೆ ಆಯುಕ್ತ ಜಿ ಎಸ್ ಹೆಗಡೆ ಅವರು ದೀಪ ಬೆಳಗಿಸಿ ಇತ್ತೀಚೆಗೆ ಉದ್ಘಾಟಿಸಿದರು.

ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ರಾಘವೇಂದ್ರ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯು ದೇಶದ ಏಳಿಗೆ ಹಾಗೂ ಪ್ರಗತಿಯ ಪೂರಕವಾರಿಬೇಕು. ಚಾಲಕರ ಹಾಗೂ ಅವರ ಕುಟುಂಬದ ಹಿತರಕ್ಷಣೆ ಕಾಪಾಡುವ ಕೆಲಸ ಸಂಘಟನೆ ಮಾಡಬೇಕು ಮತ್ತು ರಾಜಕೀಯ ರಹಿತವಾಗಿ ಸಂಘಟನೆ ಕಾರ್ಯನಿರ್ವಹಿಸಬೇಕು ಎಂದರು.

ಅಫಘಾತಕ್ಕೆ ಒಳಗಾಗಿ ದುಡಿಯಲು ಅಸಾಧ್ಯವಾದ ಚಾಲಕರಿಗೆ ರೂ 10000 ದಂತೆ ಧನಸಹಾಯವನ್ನು ಒದಗಿಸಲಾಯಿತು.

ಯುವ ಕಾಂಗ್ರೆಸ್ ಮಿಥುನ್ ರೈ, ಸಂದೀಪ್ ಕುಮಾರ್, ಸಂದೀಪ್ ಶೆಟ್ಟಿ,ಸುರೇಶ್ ಕುಮಾರ್, ಯೋಗಿಶ್ ಶೆಟ್ಟಿ ಜೆಪ್ಪು, ರಾಜಗೋಪಾಲ್ ರೈ ಹಾಗೂ ಇತರರು ಉಪಸ್ಥಿತರಿದ್ದರು.


Spread the love