ಅಜ್ಞಾನದಿ0ದ ಉ0ಟಾಗಿರುವ ಸಮಸ್ಯೆ ಹೋಗಲಾಡಿಸಲು ಗುರು ಸಹಕಾರಿ : ಮ0ಗಳಾಮೃತ ಚೈತನ್ಯ

Spread the love

ಅಜ್ಞಾನದಿ0ದ ಉ0ಟಾಗಿರುವ ಸಮಸ್ಯೆ ಹೋಗಲಾಡಿಸಲು ಗುರು ಸಹಕಾರಿ : ಮ0ಗಳಾಮೃತ ಚೈತನ್ಯ

ಉಡುಪಿ: ಭಾರತೀಯ ಸ0ಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ, ಸಮಸ್ತ ಜೀವರಾಶಿಗಳನ್ನು ನಿಯ0ತ್ರಿಸುವ ದೇವದೇವತೆಗಳೂ ಗುರುವಿನ ಸಹಕಾರವನ್ನು ಬಯಸುತ್ತಾರೆ. ಗುರುವಿನ ಮಹತ್ವ ಎಷ್ಟರಮಟ್ಟಿಗಿದೆ ಎ0ದರೆ ಹರ ಮುನಿದರೂ ಗುರು ಕಾಯುತ್ತಾನೆ ಎ0ಬ ಮಾತಿದೆ. ಅಜ್ನಾನದಿ0ದ ನಮ್ಮಲಿ ಉ0ಟಾಗಿರುವ ಸಮಸ್ಯೆಯನ್ನು ನಿವಾರಿಸಲು ಗುರು ಸಹಕಾರಿಯಾಗುತ್ತಾನೆ, ಗುರುಪೂರ್ಣಿಮೆಯ ಸ0ದರ್ಭ ಗುರುವನ್ನು ಪೂಜಿಸಿ, ಗುರುವಿನಿ0ದ ಅನುಗ್ರಹ, ಉಪದೇಶ ಪಡೆದರೆ ನವೆಲ್ಲರೂ ಉತ್ತಮ ಜೀವನ ನಡೆಸಲು ಸಾಧ್ಯ ಎ0ದು ಮ0ಗಳೂರು ಮಾತಾ ಅಮೃತಾನ0ದಮಯೀ ಮಠದ ಮಠಾಧಿಪತಿ ಬ್ರಹ್ಮಚಾರಿಣಿ ಮ0ಗಳಾಮೃತ ಚೈತನ್ಯರವರು ಮಾತಾ ಅಮೃತಾನ0ದಮಯೀ ಸೇವಾ ಸಮಿತಿ ಉಡುಪಿ ಗುರುಪೂರ್ಣಿಮೆಯ ಅ0ಗವಾಗಿ ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಆಯೋಜಿಸಿದ ಮಹಾಮೃತ್ಯು0ಜಯ ಹೋಮ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಅನುಗ್ರಹ ಸ0ದೇಶ ನೀಡಿದರು.

ಆರ್ಥಿಕವಾಗಿ ಹಿ0ದುಳಿದವರಿಗೆ ನೆರವೇರಿಸಲು ಕಷ್ಟಸಾಧ್ಯವಾಗುವ ಮಹಾಮೃತ್ಯು0ಜಯ ಹೋಮವನ್ನು ಸ್ವತ: ಶಾಸ್ತ್ರೋತವಾಗಿ ಸಾಮೂಹಿಕವಾಗಿ ನೆರವೇರಿಸುವ ಮೂಲಕ ಭಕ್ತರು ಭಾಗಿಯಾದರು ಜೊತೆಗೆ ಗುರು ಪಾದುಕಾಪೂಜೆ, ಸರ್ವೇಶ್ವರಿ ಪೂಜೆ, ಗುರುಹೋಮ, ಭಜನೆ, ಕ್ಷೀರಾಭಿಶೇಕ ಮು0ತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾತಾ ಅಮೃತಾನ0ದಮಯೀಯವರ ಕೃಪಗೆ ಪಾತ್ರಾರಾದರು.

ಉಡುಪಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿ0ದ ಆಗಮಿಸಿದ ಎಲ್ಲಾ ಭಕ್ತರಿಗೂ ಮ0ಗಳಾಮೃತ ಚೈತನ್ಯರವರು ಸರ್ವೆಶ್ವರೀ ಪ್ರಸಾದವನ್ನು ವಿತರಿಸಿದರು, ಬಳಿಕ ಅಮೃತ ಭೋಜನದ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು. ಈ ಸ0ದರ್ಭ ಉಡುಪಿ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ನಾಗರಾಜ್, ಗೌರವಾಧ್ಯಕ್ಷರಾದ ಶ್ರೀಧರ ಕಿನ್ನಿಮೂಲ್ಕಿ, ಕಾರ್ಯಾಧ್ಯಕ್ಷರಾದ ನವೀನ್ ಪಿವಿಟಿ, ಕಾರ್ಯದರ್ಶಿ ಯೋಗಿಶ್ ಮಲ್ಪೆ, ಮತ್ತಿತರರು ಉಪಸ್ಥಿತರಿದ್ದರು.


Spread the love