ಅತ್ತಾವರ ಕೆಎಂಸಿ ಆಸ್ಪತ್ರೆಯ ಆಂಕಾಲಜಿ ಕೇಂದ್ರದಲ್ಲಿ ಅತ್ಯುನ್ನತ ದರ್ಜೆಯ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ಅನುಷ್ಠಾನ

Spread the love

ಅತ್ತಾವರ ಕೆಎಂಸಿ ಆಸ್ಪತ್ರೆಯ ಆಂಕಾಲಜಿ ಕೇಂದ್ರದಲ್ಲಿ ಅತ್ಯುನ್ನತ ದರ್ಜೆಯ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ಅನುಷ್ಠಾನ

ಮಂಗಳೂರು: ಮಂಗಳೂರಿನ ಅತ್ತಾವರದ ಕೆಎಂಸಿಯ ಆಸ್ಪತ್ರೆಯ ಆಂಕಾಲಜಿ ಕೇಂದ್ರ (ಕೆಎಂಸಿಎಚ್‌ಎಒಸಿ)ದಲ್ಲಿ ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೈಕೆಯನ್ನು ಹೊಸ ಎತ್ತರಕ್ಕೆ ತಲುಪಿಸುವುದಕ್ಕಾಗಿ ಕ್ಯಾನ್ಸರ್ ಮತ್ತು ಕ್ಯಾನ್ಸರೇತರ ಅನಾರೋಗ್ಯಗಳಿಗೆ ಪರಿಣಾಮಕಾರಿ ಮತ್ತು ನಿಖರ ಚಿಕಿತ್ಸೆಯನ್ನು ಒದಗಿಸಬಲ್ಲ ಚಿಕಿತ್ಸಾ ವಿಧಾನವಾಗಿರುವ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯನ್ನು ಅಳವಡಿಸಿಕೊಳ್ಳಲಾಗಿದೆ.

ರೇಡಿಯೇಶನ್ ಬೀಮ್‌ಗಳನ್ನು ಸೂಜಿಮೊನೆಯಷ್ಟು ನಿಖರವಾಗಿ ಗುರಿಯಾಗಬೇಕಿರುವ ಗಡ್ಡೆಯ ಮೇಲೆ ಹಾಯಿಸುವ ಮೂಲಕ ಕ್ಯಾನ್ಸರ್ ಅಂಗಾAಶಗಳನ್ನು ನಿರ್ಮೂಲಗೊಳಿಸುವುದು ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯ ಕಾರ್ಯವಿಶೇಷ. ಇದೇವೇಳೆ ಗಡ್ಡೆಯ ಸುತ್ತಲಿನ ಆರೋಗ್ಯವಂತ ಅಂಗಾAಶಗಳಿಗೆ ಆಗಬಲ್ಲ ಹಾನಿ ಅತ್ಯಂತ ಕನಿಷ್ಠ ಮಟ್ಟದಲ್ಲಿರುತ್ತದೆ. ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯಲ್ಲಿ ಗಡ್ಡೆಯನ್ನು ಬಹು ಆಯಾಮಗಳಿಂದ ವಿಕಿರಣ ಚಿಕಿತ್ಸೆಗೆ ಗುರಿ ಪಡಿಸಲು ಸಾಧ್ಯವಾಗುವುದರಿಂದ ಚಿಕಿತ್ಸೆಯ ಪರಿಣಾಮ ಗರಿಷ್ಠ ಮಟ್ಟದಲ್ಲಿರುತ್ತದೆ, ಅಡ್ಡ ಪರಿಣಾಮಗಳು ಅತ್ಯಂತ ಕನಿಷ್ಟವಾಗಿರುತ್ತವೆ.

ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯು ಮೂರು ಪ್ರಧಾನ ಕಾರ್ಯವಿಧಾನಗಳನ್ನು ಒಳಗೊಂಡಿದೆ: ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಸರ್ಜರಿ (ಎಸ್‌ಆರ್‌ಎಸ್), ಫ್ರಾಕ್ಷನೇಟೆಡ್ ಎಸ್‌ಆರ್‌ಎಸ್ (ಎಫ್-ಎಸ್‌ಆರ್‌ಎಸ್) ಮತ್ತು ಸ್ಟೀರಿಯೊಟ್ಯಾಕ್ಟಿಕ್ ಬಾಡಿ ರೇಡಿಯೇಶನ್ ಥೆರಪಿ (ಎಸ್‌ಬಿಆರ್‌ಟಿ). ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ (ಎಸ್‌ಆರ್‌ಎಸ್)ಯಲ್ಲಿ ಮೆದುಳು ಅಥವಾ ಬೆನ್ನುಹುರಿಯಲ್ಲಿ ಇರುವ ಗಡ್ಡೆಗಳನ್ನು ಒಂದು ಚಿಕಿತ್ಸಾ ಅವಧಿಯಲ್ಲಿ ನಿಖರವಾದ ವಿಕಿರಣ ಚಿಕಿತ್ಸೆಗೆ ಗುರಿಪಡಿಸಲಾಗುತ್ತದೆ.

ಫ್ರಾಕ್ಷನೇಟೆಡ್ ಎಸ್‌ಆರ್‌ಎಸ್‌ನಲ್ಲಿ ೨ ಅಥವಾ ೩ ಚಿಕಿತ್ಸಾ ಅವಧಿಗಳಲ್ಲಿ ವಿಕಿರಣ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ; ಇಲ್ಲಿ ಪ್ರಮುಖವಾಗಿ ಮೆದುಳು ಅಥವಾ ಬೆನ್ನುಹುರಿಯಲ್ಲಿರುವ ಗಡ್ಡೆಗಳನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ಸ್ಟೀರಿಯೊಟ್ಯಾಕ್ಟಿಕ್ ಬಾಡಿ ರೇಡಿಯೇಶನ್ ಥೆರಪಿ (ಎಸ್‌ಬಿಆರ್‌ಟಿ)ಯಲ್ಲಿ ದೇಹದ ಯಾವುದೇ ಭಾಗದಲ್ಲಿ ಇರುವ ಗಡ್ಡೆಯನ್ನು ೧ರಿಂದ ೫ ಚಿಕಿತ್ಸಾ ಅವಧಿಗಳಲ್ಲಿ ವಿಕಿರಣ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ಇತರ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ಪೂರ್ಣಗೊಳ್ಳುವುದಕ್ಕೆ ೫ರಿಂದ ೭ ವಾರಗಳು ಬೇಕು. ಇದಕ್ಕೆ ಹೋಲಿಸಿದರೆ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಗೆ ಕಡಿಮೆ ಸಮಯ ಸಾಕು; ೧ರಿಂದ ೫ ದಿನಗಳಲ್ಲಿ ಚಿಕಿತ್ಸೆಯು ಸಂಪೂರ್ಣಗೊಳ್ಳುತ್ತದೆ. ಇದು ರೋಗಿಗೆ ಆರಾಮದಾಯಕವಾಗಿರುತ್ತದೆಯಲ್ಲದೆ ಅಡ್ಡ ಪರಿಣಾಮಗಳು ಕಡಿಮೆ ಇರುತ್ತವೆ.

ಅತ್ತಾವರ ಕೆಎಂಸಿಯಲ್ಲಿ ನೂತನವಾಗಿ ಅಳವಡಿಸಿಕೊಳ್ಳಲಾಗಿರುವ ಈ ವಿನೂತನ ರೇಡಿಯೇಶನ್ ಚಿಕಿತ್ಸೆ ಪ್ರಯೋಜನವನ್ನು ಮೊತ್ತಮೊದಲಾಗಿ ಪಡೆದುಕೊಂಡವರು ೨೭ ವರ್ಷ ವಯಸ್ಸಿನ ಒಬ್ಬರು ರೋಗಿ. ಅವರು ತಲೆನೋವು ಮತ್ತು ದ್ವಂದ್ವ ದೃಷ್ಟಿಯ ಲಕ್ಷಣಗಳನ್ನು ಹೊಂದಿದ್ದು, ಮೆದುಳು ಕಾಂಡ ಭಾಗದಲ್ಲಿ ಕ್ಯಾವೆರ್ನಸ್ ಹಿಮಾಂಜಿಯೊಮಾಕ್ಕೆ ತುತ್ತಾಗಿದ್ದರು.

ನರಶಾಸ್ತçಜ್ಞರು ಮತ್ತು ಆಂಕಾಲಜಿ ತಜ್ಞರನ್ನು ಒಳಗೊಂಡು ಬಹುವಿಭಾಗೀಯ ವೈದ್ಯಕೀಯ ತಂಡದ ಗಹನ ಸಮಾಲೋಚನೆಯ ಬಳಿಕ ಈ ರೋಗಿಗೆ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ಚಿಕಿತ್ಸೆಯನ್ನು ನೀಡುವ ತೀರ್ಮಾನಕ್ಕೆ ಬರಲಾಯಿತು.

ಆಂಕಾಲಜಿ ತಜ್ಞರಾದ ಡಾ| ಅತೀಯಮಾನ್ ಎಂ.ಎಸ್., ಡಾ| ಸೌರ್ಜ್ಯ ಬ್ಯಾನರ್ಜೀ. ಡಾ| ಜಾನ್ ಸನ್ನಿ, ಡಾ| ಅಭಿಷೇಕ್ ಕೃಷ್ಣ ಮತ್ತು ಡಾ| ಪೌಲ್ ಸೈಮನ್ ಅವರ ನಿಪುಣ ಮಾರ್ಗದರ್ಶನದಲ್ಲಿ ವೈದ್ಯರಾದ ಡಾ| ಚಳ್ಳಪಳ್ಳಿ ಶ್ರೀನಿವಾಸ್ ಮತ್ತು ಡಾ| ಡಿಲ್ಸನ್ ಲೊಬೊ ಅವರ ಸಶಕ್ತ ಸಹಕಾರದೊಂದಿಗೆ, ತಂತ್ರಜ್ಞರಾದ ರೀನು ರಾಬರ್ಟ್, ಅಭಿರಾಮ್ ರಾಧಾಕೃಷ್ಣನ್ ಮತ್ತು ಮೋಹನ್ ಜಿ. ಹಾಗೂ ದಾದಿಯರಾದ ಶೋಭಾ ಶೆಟ್ಟಿ, ಅರ್ಚನಾ ಅಮೀನ್ ಮತ್ತು ಸಿಂಥಿಯಾ ಅವರ ನೆರವಿನೊಂದಿಗೆ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯನ್ನು ನಿಖರ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ನಡೆಸಲಾಯಿತು.

ಇತ್ತೀಚೆಗೆಯಷ್ಟೇ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಟ್ರೂಬೀಮ್ ಯಂತ್ರವು ಈ ಸಾಧನೆಯ ಕೇಂದ್ರಬಿAದುವಾಗಿತ್ತು. ಈ ಅತ್ಯುನ್ನತ ತಂತ್ರಜ್ಞಾನವು ಗುರಿನಿರ್ದೇಶಿತ ವಿಕಿರಣ ಚಿಕಿತ್ಸೆಯನ್ನು ಸೂಜಿಮೊನೆಯಷ್ಟು ನಿಖರವಾದ ಕಾರ್ಯದಕ್ಷತೆ ಮತ್ತು ಪರಿಣಾಮಕಾರಿತ್ವದೊಂದಿಗೆ ನೀಡುವುದಕ್ಕೆ ಸಹಾಯ ಮಾಡುವ ಮೂಲಕ ಈ ಪ್ರದೇಶದಲ್ಲಿ ಜಾಗತಿಕ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ಕೆಎಂಸಿಎಚ್‌ಎಒಸಿಯ ಬದ್ಧತೆಯನ್ನು ಸಾಬೀತುಪಡಿಸಿದೆ.

ಅತ್ತಾವರ ಕೆಎಂಸಿಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಈ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಮAಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಅಗತ್ಯವುಳ್ಳವರು ತಮ್ಮ ಮನೆಬಾಗಿಲಿನಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯ ಆಯ್ಕೆಯನ್ನು ಹೊಂದಿದAತಾಗಿದೆ. ಈ ಭಾಗದಲ್ಲಿಯ ಆಂಕಾಲಜಿ ಆರೈಕೆ, ಚಿಕಿತ್ಸೆಯ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ಕೆಎಂಸಿಎಚ್‌ಎಒಸಿಯ ಹೆಗ್ಗಳಿಕೆಗೆ ನಿದರ್ಶನವಾಗಿ ಆಸ್ಪತ್ರೆಯು ಈ ಅತ್ಯುತ್ಕೃಷ್ಟ ಮತ್ತು ನಿಖರ ಕ್ಯಾನ್ಸರ್ ಚಿಕಿತ್ಸಾ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡಿದೆ.


Spread the love