ಅತ್ತೂರು ಬೆಸಿಲಿಕಾಗೆ ಸಚಿವೆ ಜಯಮಾಲಾ ಭೇಟಿ

Spread the love

ಅತ್ತೂರು ಬೆಸಿಲಿಕಾಗೆ ಸಚಿವೆ ಜಯಮಾಲಾ ಭೇಟಿ

ಕಾರ್ಕಳ: ಇತಿಹಾಸ ಪ್ರಸಿದ್ದ ಕಾರ್ಕಳ ಅತ್ತೂರು ಸಂತ ಲಾರೆನ್ಸರ ಬೆಸಿಲಿಕಾದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಗುರುವಾರ ಭೇಟಿ ಪ್ರಾರ್ಥನೆ ಸಲ್ಲಿಸಿದರು.

ಚರ್ಚಿಗೆ ಆಗಮಿಸಿದ ಸಚಿವೆಯನ್ನು ಬೆಸಿಲಿಕಾದ ನಿರ್ದೇಶಕರಾದ ವಂ|ಜೋರ್ಜ್ ಡಿಸೋಜಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಬಳಿಕ ಸಚಿವರು ಚರ್ಚಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರಲ್ಲದೆ ಸಂತ ಲಾರೆನ್ಸರ ಪವಾಡ ಮೂರ್ತಿಯ ದರ್ಶನಗೈದು ಬೃಹತ್ ಗಾತ್ರದ ಮೇಣದ ಬತ್ತಿಯನ್ನು ಉರಿಸಿದರು.

ಈ ವೇಳೆ ಚರ್ಚಿನ ಸಹಾಯಕ ಧರ್ಮಗುರು ವಂ|ಜಾನ್ಸಿಲ್ ಆಳ್ವಾ, ಜಾನ್ ಡಿಸಿಲ್ವಾ ಸಂತೋಷ್ ಡಿಸಿಲ್ವಾ, ಕಾಂಗ್ರೆಸ್ ನಾಯಕರಾದ, ವಿಘ್ನೇಶ್ ಕಿಣಿ, ಶುಭದ ರಾವ್, ರೆಹಮತ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love