ಅಧ್ಯಾಪಕರಿಗೆ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆ

Spread the love

ಅಧ್ಯಾಪಕರಿಗೆ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆ

ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಬಿ.ಎ.ಎಸ್.ಎಫ್.ಇಂಡಿಯಾ ಇವರ ಸಹಯೋಗದೊಂದಿಗೆ ಹಾಗೂ ದ. ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮಂಗಳೂರು ನಗರದ ಉತ್ತರ ಮತ್ತು ದಕ್ಷಿಣ ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಅಧ್ಯಾಪನಕ್ಕೆ ಸಂಬಂಧಿಸಿದ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಸೂರತ್ಕಲ್‍ನ ಬಿ.ಎ.ಎಸ್.ಎಫ್.ನ ಕ್ಯಾಂಪಸ್‍ನಲ್ಲಿ ಏರ್ಪಡಿಸಲಾಗಿತ್ತು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್, ಮಾತನ್ನಾಡುತ್ತಾ ಸರ್ಕಾರಿ ಪ್ರೌಢ ಶಾಲೆಗಳ ಅಧ್ಯಾಪಕರ ಕೋರಿಕೆಯಂತೆ ವಿಜ್ಞಾನ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು ಈಗ ಬಿ.ಎ.ಎಸ್.ಎಫ್. ಇಂಡಿಯಾ ಇವರ ನೆರವಿನೊಂದಿಗೆ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇಂತಹ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸಹಾಯಹಸ್ತ ನೀಡಲು ಮುಂದೆ ಬಂದರೆ ಸರಕಾರಿ ಪ್ರೌಢಶಾಲೆಗಳ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಬಿ.ಎ.ಎಸ್.ಎಫ್. ಇಂಡಿಯಾ, ಮಂಗಳೂರು ಘಟಕದ ನಿರ್ದೇಶಕ ಶ್ರೀ ಶ್ರೀನಿವಾಸ್ ಪ್ರಾಣೇಶ್ ಮಾತನಾಡಿ ರಸಾಯನಶಾಸ್ತ್ರವು ನಮ್ಮ ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಕೆಲವರಿಗೆ ರಸಾಯನಶಾಸ್ತ್ರ ಎಂದರೆ ಇದೊಂದು ಅಪಾಯಕಾರಿ ಎಂಬ ಮನೋಭಾವನೆ ಹೊಂದಿದ್ದು, ಇದರಿಂದ ಹೊರಬರಬೇಕಾಗಿದೆ. ತಮ್ಮ ಸಂಸ್ಥೆಯು ರಸಾಯನಶಾಸ್ತ್ರದ ಅಧ್ಯಯನ ಅಧ್ಯಾಪನಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದ್ದು ಮುಂದೆಯು ಸಹ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸದಾ ಸಿದ್ಧ ಎಂದರು. ಡಾ. ಪರಾಗ್ ಕುಮಾರ್ ಟಾಂಕಿ ಪ್ರಾಸ್ತಾವಿಕನ್ನುಡಿಗಳನ್ನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಶ್ರೀಮತಿ ಶೋಭ ಎನ್., ಪೆÇ್ರ. ಜಯಂತ ಉಪಸ್ಥಿತರಿದ್ದರು. ಶ್ರೀ ಸಂತೋಷ ಪೈ ಸ್ವಾಗತಿಸಿದರೆ, ಶ್ರೀ ಮೈಕಲ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಣೆಗೈದರು.

ನಂತರ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಹತ್ತು ತಂಡಗಳನ್ನಾಗಿ ಮಾಡಿ ಹತ್ತನೇ ತರಗತಿಯ ರಸಾಯನಶಾಸ್ತ್ರದ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಬಿ.ಎ.ಎಸ್.ಎಫ್.ನ ತಂಡವು ಮಾಡಿ ತೋರಿಸಿದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ್ ಹಾಗೂ ಶೈಕ್ಷಣಿಕ ಸಹಾಯಕ ಶ್ರೀ ಶರಣಯ್ಯ ಕೆಲವು ಭೌತಶಾಸ್ತ್ರದ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಕೂಡ ಮಾಡಿ ತೋರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾರ್ಯಾಗಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಇಂತಹ ವಿಶೇಷ ಕಾರ್ಯಕ್ರಮಗಳು ಪಠ್ಯಕ್ರಮ ಬದಲಾದಾಗ ತುಂಬಾ ಉಪಯುಕ್ತವಾಗುತ್ತದೆ ಎಂದರು.


Spread the love