ಅನಾರೋಗ್ಯದಿಂದ ಬಳಲುತ್ತಿದ್ದ ಕೊಲ್ಲೂರು ದೇವಳದ ಆನೆ ಇಂದಿರಾ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಕೊಲ್ಲೂರು ದೇವಳದ ಆನೆ ಇಂದಿರಾ ಸಾವು

ಕುಂದಾಪುರ: ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಹೆಣ್ನಾನೆ ‘ಇಂದಿರಾ’ ತೀವ್ರ ಜ್ವರರದಿಂದ ಬಳಲಿ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ ಘಟನೆ ವರದಿಯಾಗಿದೆ.

ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಮಂಗಳವಾರ ಬೆಳಗ್ಗೆ ನಿತ್ರಾಣಗೊಂಡು ನಿಂತಲ್ಲಿಂದ ಕುಸಿದು ಬಿದ್ದಿತ್ತು. ಬಳಿಕ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ತೀವ್ರ ಜ್ವರ ಮಿದುಳಿಗೆ ಏರಿದ ಕಾರಣ ಆನೆ ಸಾವಿಗೀಡಾಗಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ.

ಸುಮಾರು 62 ವರ್ಷ ಪ್ರಾಯದ ಇಂದಿರಾ ಎನ್ನುವ ಆನೆಯನ್ನು ಬಾಣೆಹೊನ್ನೂರಿನ ಕ್ರಷಿಕ ಹಾಗೂ ಉದ್ಯಮಿ ಮಧು ಎನ್ನುವರು ಎರಡೂವರೆ ದಶಕದ ಹಿಂದೆ ದೇವಳಕ್ಕೆ ದಾನ ಕೊಟ್ಟಿದ್ದು ಐಯಣ್ಣ ಯಾನೆ ಬಾಬಣ್ಣ ಎನ್ನುವರು ಇಂದಿರಾಳಿಗೆ ಮಾವುತರಾಗಿದ್ದರು.