ಅಪಘಾತಗೊಂಡ ಮಹಿಳೆಗೆ ನೆರವಾದ ಶಾಸಕ ಡಾ ಭರತ್ ವೈ ಶೆಟ್ಟಿ

ಅಪಘಾತಗೊಂಡ ಮಹಿಳೆಗೆ ನೆರವಾದ ಶಾಸಕ ಡಾ ಭರತ್ ವೈ ಶೆಟ್ಟಿ

ಸುರತ್ಕಲ್: ರಸ್ತೆ ಅಪಘಾತವೊಂದರಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಶಾಸಕರಾದ ಡಾ ಭರತ್ ವೈ ಶೆಟ್ಟಿ ಅವರು ತನ್ನ ತುರ್ತು ಕಾರ್ಯಕ್ರಮವನ್ನು ರದ್ದುಗೊಳಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ರವಿವಾರ ಸುರತ್ಕಲ್ ಸಮೀಪ ನಡೆದಿದೆ.

ಸುರತ್ಕಲ್ ಬಳಿ ಅಪಘಾತದಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದ ಮಹಿಳೆಯನ್ನು ಆ ದಾರಿಯಲ್ಲಿ ಸಂಚರಿಸುತ್ತಿದ್ದ ಶಾಸಕರು ಕಂಡು ಕೂಡಲೇ ಮಹಿಳೆಯ ಆರೈಕೆ ಮಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿ ತಮ್ಮ ಕರ್ತವ್ಯ ಮೆರೆದಿದ್ದಾರೆ .

ತನ್ನ ವೃತ್ತಿಪರತೆಯನ್ನು ಹಾಗೂ ಮಾನವೀಯತೆಯನ್ನು ಮೆರೆದ ಶಾಸಕ ಡಾ ಭರತ್ ವೈ ಶೆಟ್ಟಿಯವರ ನಡೆ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.