ಅಪ್ರತಿಮ ಕಲಾಪ್ರತಿಭೆ ಕು. ಸ್ಮೃತಿ ದಯಾನಂದ ಶೆಣೈ ಭರತನಾಟ್ಯ ರಂಗಪ್ರವೇಶ

Spread the love

ಗಲ್ಫ್ರಾಷ್ಟ್ರದ ಅಪ್ರತಿಮ ಕಲಾಪ್ರತಿಭೆ ಕು. ಸ್ಮೃತಿ ದಯಾನಂದ ಶೆಣೈ ಭರತನಾಟ್ಯ ರಂಗಪ್ರವೇಶ

ಅರಬ್ಸಂಯುಕ್ತ ಸಂಸ್ಥಾನದಲ್ಲಿ ಭರತನಾಟ್ಯ ಕಲಿಯುತಿರುವ ಕು ಸ್ಮೃತಿದಯಾನಂದ ಶೆಣೈ ಭರತನಾಟ್ಯ ರಂಗಪ್ರವೇಶ 2017 ಜುಲೈ 9 ರಂದು ಕರ್ನಾಟಕದ ಕಡಲತೀರದ ಉಡುಪಿಯಲ್ಲಿರುವ ಎಂ.ಜೆ.ಎಂ. ಕಾಲೇಜಿನ ರವೀಂದ್ರ ಕಲಾಮಂಟಪದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ.

ಯು.ಎ.ಇ.ಯಲ್ಲಿರುವ “ಕ್ಲಾಸಿಕಲ್ರಿದಂಸ್” ಕಲಾಸಂಸ್ಥೆಯ ಮುಖ್ಯಸ್ಥೆ ವಿದೂಷಿ ರೋಹಿಣಿ ಅನಂತ್ಶಿಷ್ಯೆಯಾಗಿರುವ ಕು. ಸ್ಮೃತಿ ಶೆಣೈ ಭರತನಾಟ್ಯ ರಂಗಪ್ರವೇಶ ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ, ನಿರ್ದೇಶಕರು, ನಟರಾದ ಶ್ರೀ ಕಾಸರಗೋಡುಚಿನ್ನಾ, ವಿದೂಷಿಮಾನಸಿ, ಕೊಡವೂರು ನೃತ್ಯನಿಕೇತನಾ ಸ್ಥಾಪಕ ನಿರ್ದೇಶಕರು ವಿದ್ವಾನ್ಸುಧೀರ್ರಾವ್ಭಾಗವಹಿಸಲಿದ್ದಾರೆ.

ಅರಬ್ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಶ್ರೀಮತಿ ದೀಪಾಶೆಣೈ ಹಾಗೂ ಶ್ರೀದಯಾನಂದ ಶೆಣೈ ದಂಪತಿಗಳ ಪ್ರಥಮ ಪುತ್ರಿ ಕು. ಸ್ಮೃತಿ ಶೆಣೈ ಶಾರ್ಜದಲ್ಲಿರುವ ಅವರ್ಹೋನ್ಗರ್ಲ್ಸ್ಹೈಸ್ಕೂಲ್ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾಳೆ. ಪಠ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತಿಯೊಂದಿಗೆ ಭರತನಾಟ್ಯ, ಚಿತ್ರಕಲೆ, ಸಂಗೀತದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ.

ತನ್ನ  ಐದನೆಯ ವಯಸ್ಸಿನಲ್ಲೇ ಭರತನಾಟ ಅಭ್ಯಾಸಕ್ಕೆ ಪಾದರ್ಪಣೆಮಾಡಿದ್ದು ಶಾರ್ಜಾದಲ್ಲಿರುವ ಸಿಂಫೋನಿಮ್ಯೂಸಿಕ್ ಇನಿಸ್ಟಿಟ್ಯೂಟ್ನಲ್ಲಿ ಗುರು ಶಕ್ತಿ ಮೊದಲಗುರುವಾಗಿದ್ದಾರೆ.  ನಂತರ2012 ರಿಂದ ಕ್ಲಾಸಿಕ ಲ್ರಿದಂಸ್ನ ವಿದೂಷಿ ರೋಹಿಣಿ ಅನಂತ್ರವರ ತಪೋಭೂಮಿಯಲ್ಲಿ ತನ್ನಶಾಸ್ತ್ರೀಯ ನೃತ್ಯ ಅಭ್ಯಾಸ ಮುಂದುವರೆಸಿಕೊಂಡು ಬರುತಿದ್ದಾಳೆ.

ಅರಬ್ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ಮತ್ತು ಕರ್ನಾಟಕ ಪರಸಂಘಟನೆಗಳ ಪ್ರತಿಷ್ಠಿತವೇದಿಕೆಗಳಲ್ಲಿ ಅದ್ಧೂರಿಯಾಗಿ ನಡೆದ ವಿಶ್ವಕನ್ನಡ ಸಮ್ಮೇಳನ, ಕರ್ನಾಟಕ ರಾಜ್ಯೋತ್ಸವ, ಭಾರತೀಯ ದೂತವಾಸ ಕಛೇರಿಯ ರಂಗಮಂದಿರಗಳಲ್ಲಿ ರಾಷ್ಟ್ರೀಯ ಹಬ್ಬಗಳು, ಇನ್ನಿತರ ಪ್ರಮುಖ ಸಮಾರಂಭಗಳಲ್ಲಿ ತನ್ನ ಅದ್ಭುತ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದ್ದು ಪ್ರೇಕ್ಷಕರ ಮನಸೆಳೆದಿದ್ದಾಳೆ.

ಭಾರತೀಯ ಶ್ರೀಮಂತ ಕಲೆ ನಾಟ್ಯಶಾಸ್ತ್ರದಲ್ಲಿ ಶಾಸ್ತ್ರೀಯವಾಗಿ ಅಭ್ಯಾಸವನ್ನುಮಾಡಿ ಇದೀಗ ಭರತನಾಟ್ಯರಂಗ ಪ್ರವೇಶ (ಅರಂಗೆಟ್ರಂ) ಮೂಲಕ ಶಾಸ್ತ್ರೀಯ ಭರತನಾಟ್ಯ ಕಲಾವಿದೆಯಾಗಿ ಭಾರತೀಯ ಕಲಾಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಸೇತುವೆಯಾಗಲಿದ್ದಾಳೆ. ಕಲಾದೇವಿಯ ಉಪಾಸನೆಯಲ್ಲಿ ಮುನ್ನಡೆಯ ಹೆಜ್ಜೆಗಳನ್ನಿಡುವ ನಮ್ಮೆಲ್ಲರ ನೆಚ್ಚಿನ ಕಿರಿಯ ಕಲಾವಿದೆ ಕು ಸ್ಮೃತಿ ಶೆಣೈ ಕಲಾಗುರು ಕೊಲ್ಲಿ ನಾಡಿನ ಸಾಂಸ್ಕೃತಿಕ ಕಲಾರಾಯಬಾರಿ ವಿದೂಷಿ ಶ್ರೀಮತಿ ರೋಹಿಣಿ ಅನಂತ್

ರೋಹಿಣಿ ಅನಂತ್ದು ಬಾಯಿಯ ಪರಿಸರದಲ್ಲಿ ಆಸಕ್ತ ಮಕ್ಕಳನ್ನು ಒಟ್ಟುಮಾಡಿ “ಕ್ಲಾಸಿಕಲ್ರಿದಂಸ್” ತಂಡವನ್ನು ರಚಿಸಿ ಹಲವಾರು ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟರು. ಇದೇ ಅವಧಿಯಲ್ಲಿ ತಮ್ಮ ಕಲಾಪ್ರತಿಭೆಗೆ ಗುರುಗಳಾದ ಶ್ರೀಮತಿ ರಾಜಲಕ್ಷ್ಮಿ, “ಪಂಡನಲ್ಲೂರುಶೈಲಿ” ಪ್ರಸಿದ್ದಿ, ಗುರು ಶ್ರೀಮತಿ ರೇವತಿ ನರಸಿಂಹನ್, ಗುರು ಶ್ರೀಮತಿ ಲಲಿತಾ ಶ್ರೀನಿವಾಸನ್ – ಮೈಸೂರುಶೈಲಿ, ಗುರುಶ್ರೀಮತಿ ಪದ್ಮಿ ನಿರವಿವಳು ವೂರ್ಶೈಲಿಗಳ ಮೆರಗು ಸೇರಿಸಿ ತನ್ನಲ್ಲಿರುವ ನೃತ್ಯ ಕಲೆಗೆ ಹೆಚ್ಚಿನ ಮಹತ್ವದೊಂದಿಗೆ ಹಲವಾರು ನೃತ್ಯಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ರೋಹಿಣಿ ಅನಂತ್ರವರ ಕನಸಿನ ಕಲ್ಪನೆಯ ನೃತ್ಯಶಾಲೆ “ಸ್ವರಾಲಯಸ್ಕೂಲ್ ಆಫ್ಫರ್ಪಾಮಿಂಗ್ಆರ್ಟ್ಸ್” 1996 ರಲ್ಲಿ ಪ್ರಾರಂಭಗೊಂಡು ನೂರಾಐವತ್ತ ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಭೇತಿ ನೀಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು “ವಿಧ್ವತ್” ಪರೀಕ್ಷೆಯನ್ನು ಮುಗಿಸಿದ್ದಾರೆ. ಭಾರತಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದ ಕೀರ್ತಿಇವರದ್ದು.

ರೋಹಿನಿ ಅನಂತ್ರವರು ನೃತ್ಯ ಪರಿವೀಕ್ಷಕರಾಗಿ ಕರ್ನಾಟಕ ಪರೀಕ್ಷಾಮಂಡಳಿ, ಬೆಂಗಳೂರು ನಡೆಸುವ ನೃತ್ಯ ಪರೀಕ್ಷೆಯಲ್ಲಿ ಸೇವೆಸಲ್ಲಿಸಿದ್ದಾರೆ. ಹಲವಾರು ನೃತ್ಯ ಕಾರ್ಯಗಾರಗಳಲ್ಲಿ ನೃತ್ಯದ ಬಗ್ಗೆಮಾಹಿತಿ, ತರಭೇತಿ, ವ್ಯಾಯಾಮ, ನಟುವಾಂಗದ ಮೂಲಕ ನೃತ್ಯ ರಂಗಕ್ಕೆ ಹೆಚ್ಚಿನ ಸೇವೆಸಲ್ಲಿಸಿದ್ದಾರೆ.

ವಿದೂಷಿ ರೋಹಿಣಿ ಅನಂತ್ರವರ ಸಾಧನೆಗೆ ಸಂದ ಗೌರವ ಪುರಸ್ಕಾರಗಳು

ರೋಹಿಣಿ ಅನಂತ್ರವರ ಕಲಾಸಾಧನೆಗೆ ಹಾಗೂ ಕೊಲ್ಲಿನಾಡಿನಲ್ಲಿ ಸಲ್ಲಿಸಿ ಸಾಂಸ್ಕೃತಿಕ ಸಾಧನೆಗೆ* ಕರ್ನಾಟಕ ರಾಜ್ಯಸರ್ಕಾರದ – ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

* ದುಬಾಯಿಯಲ್ಲಿ-ಎಕ್ಸ್ಲೆನ್ಸ್ಅವಾರ್ಡ್ಫಾರ್ಡ್ಯಾನ್ಸ್ಪ್ರಶಸ್ತಿ

*  ಕೇರಳಾರಾಜ್ಯ ಪ್ರಶಸ್ತಿ

* 2013 ರಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ,

* ವಿದೇಶದಲ್ಲಿ ಭಾರತೀಯ ಕಲೆಯ ಅನಾವರಣದ ಸಾಧನೆಗೆ“ಚಾಣಕ್ಯಪ್ರಶಸ್ತಿ’,

* ಕಥಕ್ಮಹೋತ್ಸವದಲ್ಲಿ“ನೃತ್ಯರತ್ನಪ್ರಶಸ್ತಿ”

ಗುರು ವಿಧೂಷಿ ರೋಹಿಣಿ ಅನಂತ್ರವರ ಶಿಷ್ಯೆ ಕು. ಸ್ಮೃತಿ ಶೆಣೈ ತನ್ನ ಅವಿರತ ಅಭ್ಯಾಸದ ಮೂಲಕ ಪರಿಣಿತಿಯನ್ನು ಪಡೆದು ಕಲಾದೇವಿಯ ಅನುಗ್ರಹಪಡೆದು ಭರತನಾಟ್ಯ ರಂಗಪ್ರವೇಶಕ್ಕೆ ತಯಾರಾಗುತಿರುವ ಶುಭಸಂದರ್ಭಕ್ಕೆ ಅನಿವಾಸಿ ಕನ್ನಡಿಗರ ಪರವಾಗಿ ಶುಭಹಾರೈಕೆಗಳು.

ಬಿ. ಕೆ. ಗಣೇಶ್ರೈ


Spread the love