ಅಭಾವಿಪ ರಾಜ್ಯ ಸಮ್ಮೇಳನ ಹಿರಿಯ ಕಾರ್ಯಕರ್ತರ ಬೈಠಕ್

Spread the love

ಅಭಾವಿಪ ರಾಜ್ಯ ಸಮ್ಮೇಳನ ಹಿರಿಯ ಕಾರ್ಯಕರ್ತರ ಬೈಠಕ್

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ.ಇದರ 39ನೇ ರಾಜ್ಯ ಸಮ್ಮೇಳನವು ದಿನಾಂಕ 7,8,9 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ (ಪುರಭವನ)ದಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಮಂಗಳೂರು ವಿಭಾಗದ ಹಿರಿಯ ಕಾರ್ಯಕರ್ತರ ಬೈಠಕ್  ಅಭಾವಿಪ ಕಾರ್ಯಾಲಯದಲ್ಲಿ ನಡೆಯಿತು.

ಈ ಬೈಠಕ್ ನಲ್ಲಿ ಹಿರಿಯ ಕಾರ್ಯಕರ್ತರಾದ ಚ.ನ.ಶಂಕರರಾವ್ ಉಪಸ್ಥಿತರಿದ್ದು,ಸಮ್ಮೇಳನದ ಪೂರ್ವ ತಯಾರಿಗಳ ಕುರಿತು ವಿದ್ಯಾರ್ಥಿ ನಾಯಕರೊಂದಿಗೆ ಮಾತನಾಡಿದರು. ಸಮ್ಮೇಳನದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿಯಾದ ಬಸವೇಶ್ ಕೋರಿ, ವಿಭಾಗ ಪ್ರಮುಖರಾದ ಕೇಶವ ಬಂಗೇರಾ, ನಗರ ಕಾರ್ಯದರ್ಶಿಯಾದ ಮಣಿಕಂಠ ಕಳಸ ಉಪಸ್ಥಿತರಿದ್ದರು. ಸಮ್ಮೇಳನದ ವ್ಯವಸ್ಥ ಪ್ರಮುಖ್ ಸಂದೇಶ್ ರೈ ಸ್ವಾಗತಿಸಿ,ವಂದಿಸಿದರು.


Spread the love