ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿರುವ ಸಮ್ಮಿಶ್ರ ಸರಕಾರ –  ಶಾಸಕ ಡಾ. ಭರತ್ ಶೆಟ್ಟಿ

ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿರುವ ಸಮ್ಮಿಶ್ರ ಸರಕಾರ –  ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು: ಸಮ್ಮಿಶ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ ಬಿಜೆಪಿ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ, ಆದರೂ ವಿವಿಧ ಇಲಾಖೆಗಳ ಅನುದಾನವನ್ನು ತರುವಲ್ಲಿ ಸತತ ಶ್ರಮವಹಿಸಲಾಗುತ್ತಿದೆ, ಸುರತ್ಕಲ್-ಕಾನಾ ರಸ್ತೆಯ ಶಾಶ್ವತ ಕಾಮಗಾರಿಯ ಟೆಂಡರ್ ಪ್ರಗತಿಯಲ್ಲಿದ್ದು, ಸಂಸದರ ಪ್ರಯತ್ನದಿಂದ ತಾತ್ಕಾಲಿಕ ಕಾಮಗಾರಿಗೆ ಖಾಸಗಿ ಕಂಪನಿಗಳ ಸಹಕಾರದಿಂದ ಸುಮಾರು 1.5ಕೋಟಿ ರೂಪಾಯಿಗಳ ಟೆಂಡರ್ ಕೊನೆಯ ಹಂತದಲ್ಲಿದ್ದು ಒಂದು ವಾರದೊಳಗೆ ಕೆಲಸ ಪ್ರಾರಂಭವಾಗಲಿದೆ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು
ಬಿಜೆಪಿ ಕೃಷ್ಣಾಪುರ ಉತ್ತರ ಹಾಗೂ ದಕ್ಷಿಣ ಶಕ್ತಿ ಕೇಂದ್ರದ ಜಂಟಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಜೆಪಿ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಕೃಷ್ಣಾಪುರ, ಹಾಗೂ ಸುಧಾಕರ ಆಚಾರ್ಯ, ಅಡ್ಯಾರು ಮಾತನಾಡಿ ಕೃಷ್ಣಾಪುರದಲ್ಲಿ ಪಕ್ಷ ಬಲವರ್ಧನೆಗೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕೃಷ್ಣಾಪುರ 4ನೇ ವಾರ್ಡಿನಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕೊಟ್ಟಿರುವ ಕಾರ್ಯಕ್ರಮಗಳನ್ನು ಕೂಡಲೇ ಅನುಷ್ಠಾನ ಮಾಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸೋಣ ಎಂದು ವಾರ್ಡ್ ಅಧ್ಯಕ್ಷ ರಾಕೇಶ್ ಕೋಟ್ಯಾನ್ ಹೇಳಿದರು.

ವಾರ್ಡ್ ಪ್ರಧಾನ ಕಾರ್ಯದರ್ಶಿ ಹೇಮಂತ್ ಅಂಚನ್ ಸ್ವಾಗತಿಸಿದರು, ಶಕ್ತಿಕೇಂದ್ರ ಪ್ರಮುಖ್ ಪ್ರಶಾಂತ್ ಆಚಾರ್ಯ ವಂದಿಸಿದರು, ಸಭೆಯಲ್ಲಿ ಯುವಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖ್ ದೇವೇಂದ್ರ ಡಿ ಕೋಟ್ಯಾನ್, ಸಮಿತಿಯ ರತ್ನ ದೇವದಾಸ್, ಕವಿತಾ ಶೆಟ್ಟಿ, ವಾರ್ಡ್ ಉಪಾಧ್ಯಕ್ಷರಾದ ಸದಾನಂದ ಸನಿಲ್, ಸ್ಥಾನೀಯ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಮೂಲ್ಯ, ಗಿರೀಶ್ ಕುಲಾಲ್, ರಾಧಾಕೃಷ್ಣ ಶೆಟ್ಟಿ, ಆನಂದ ಶೆಟ್ಟಿ, ಕಾರ್ಯದರ್ಶಿ ಜಿತೇಶ್ ಶೆಟ್ಟಿ, ಜಗದೀಶ್, ಪದ್ಮನಾಭ ಸುಜೀರ್, ಗೀತಾ ಕುಲಾಲ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.