ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೈದ ಶಾಸಕ ಡಾ. ಭರತ್ ಶೆಟ್ಟಿ

ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೈದ ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು: ಮಹಾನಗರ ಪಾಲಿಕೆಯ ವತಿಯಿಂದ ಕಾಟಿಪಳ್ಳ 9ನೇ ಬ್ಲಾಕ್ ಗುರುನಗರದಲ್ಲಿ ರೂ.25 ಲಕ್ಷ ಮತ್ತು ಮಾನ್ಯ ಶಾಸಕರಾದ ಡಾ|ಭರತ್ ಶೆಟ್ಟಿ ಯವರ ಶಿಫಾರಸ್ಸಿನಿಂದ ಕರ್ನಾಟಕ ರಾಜ್ಯ ಸರ್ಕಾರದಿಂದ ಕೃಷ್ಣಾಪುರ 4ನೇ ಬ್ಲಾಕ್ ನಲ್ಲಿ ಮಂಜೂರಾದ ರೂ.30 ಲಕ್ಷ ದ ಕಾಮಗಾರಿಗಳ ಉದ್ಘಾಟನೆಯನ್ನು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ|ಭರತ್ ಶೆಟ್ಟಿ ವೈ ನೆರವೇರಿಸಿದರು.

ಮಾಜಿ ಮನಪಾ ಸದಸ್ಯ ತಿಲಕ್ ರಾಜ್ ಕೃಷ್ಣಾಪುರ, ಬಿಜೆಪಿ ಮಂಡಲ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಮಂಡಲ ಯುವಮೋರ್ಚಾ ಕಾರ್ಯದರ್ಶಿ ಪ್ರಶಾಂತ್ ಮುಡೈಕೋಡಿ, ನ್ಯಾಯವಾದಿ ಪಿ. ಸದಾಶಿವ ಐತಾಳ್, ಬಿಜೆಪಿ ವಾರ್ಡ್ ಅಧ್ಯಕ್ಷ ರಾಕೇಶ್ ಕೋಟ್ಯಾನ್, ಮಂಡಲ ಸಮಿತಿ ಸದಸ್ಯರಾದ ಶೇಖರ ದೇವಾಡಿಗ, ಕವಿತಾ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖ್ ದೇವೇಂದ್ರ ಡಿ ಕೋಟ್ಯಾನ್, ಪ್ರಶಾಂತ್ ಆಚಾರ್ಯ, ವಾರ್ಡ್ ಯುವಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಸೂರಜ್ ರೈ, ಸದಾನಂದ ಸನಿಲ್, ಸತೀಶ್ ಸಾಲ್ಯಾನ್, ಲಕ್ಷ್ಮೀಶ ದೇವಾಡಿಗ, ಗಿರೀಶ್ ಕುಲಾಲ್, ಪುಷ್ಪರಾಜ್ ಮೂಲ್ಯ, ಹೇಮಂತ್ ಅಂಚನ್, ರಾಧಾಕೃಷ್ಣ ಶೆಟ್ಟಿ, ಹಿಮಕರ, ದೇವೇಂದ್ರ ಪ್ರಭು, ಜಗದೀಶ, ಅಬ್ದುಲ್ ಕಬೀರ್, ರಿತೇಶ್ ದೇವಾಡಿಗ, ಮಂಜುನಾಥ ಆಚಾರ್ಯ, ಲೋಕನಾಥ್ ಶೆಟ್ಟಿ, ಸಂತೋಷ್ ಗುರುನಗರ, ರಮಾನಾಥ ಶೆಟ್ಟಿ, ಲಕ್ಷೀ ಶೇಖರ್, ಚಂದ್ರಕಲಾ, ಸುಮತಿ ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.