ಅವೈಜ್ಞಾನಿಕ ಟೋಲ್ ವಸೂಲಾತಿ ವಿರುದ್ಧ ತುರವೇ ಉಗ್ರ ಪ್ರತಿಭಟನೆ ಎಚ್ಚರಿಕೆ

Spread the love

ಅವೈಜ್ಞಾನಿಕ ಟೋಲ್ ವಸೂಲಾತಿ ವಿರುದ್ಧ ತುರವೇ ಉಗ್ರ ಪ್ರತಿಭಟನೆ ಎಚ್ಚರಿಕೆ

ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಎಚ್ಚರಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಚತುಷ್ಪಥ ಕಾಮಗಾರಿಗೆ ನಾಗರಿಕರು ಬೆಂಬಲ ಸೂಚಿಸಿದ್ದಾರೆ. ರಸ್ತೆಯ ವಿನ್ಯಾಸದಂತೆ ಕಾಮಗಾರಿ ನಡೆಯಬೇಕಿತ್ತು. ಆದರೆ ಮೊದಲು ತಯಾರಿಸಿದ ನಕ್ಷೆಯಂತೆ ರಸ್ತೆಯನ್ನು ನಿರ್ಮಿಸಿಲ್ಲ. ಕೆಲವೆಡೆ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿಗಳು ನಡೆದಿವೆ. ರಸ್ತೆಯ ಕಾಮಗಾರಿ ಶೇ. 95 ರಷ್ಟು ಪೂರ್ಣಗೊಂಡಿಲ್ಲ. ಆದರೂ ಏಕಾಏಕಿ ಟೋಲ್ ಸಂಗ್ರಹಕ್ಕೆ ಸಿದ್ಧತೆ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳಿಸದೆ ತಲಪಾಡಿಯಲ್ಲಿ ನಿರ್ಮಿಸಿದ ಟೋಲ್‍ಗೇಟ್ ನಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಕಾಮಗಾರಿ ಕೈಗೆತ್ತಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತೆದೆ. ರಸ್ತೆ ಇಕ್ಕಟ್ಟಿನಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕೂಡಲೇ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಜನ ನಿಬಿಡ ಪ್ರದೇಶದಲ್ಲಿ ಕೆಲವೆಡೆ ಜನ ಸಂಚಾರಕ್ಕೆ ಅನುಕೂಲವಾಗುವಂತೆ ಅಂಡರ್ ಪಾಸ್/ಸ್ಕೈವಾಕ್ ನಿರ್ಮಿಸಬೇಕು. ಟೋಲ್ ಗೇಟ್ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಹಾಗೂ ಹೆಚ್ಚಿನ ಪರಿಹಾರ ನೀಡಬೇಕು. ಈ ಬೇಡಿಕೆ ಈಡೇರಿಸದೆ ಟೋಲ್ ಸಂಗ್ರಹ ಮಾಡಬಾರದು. ಒಂದು ಬೇಡಿಕೆ ಈಡೇರಿಸದೆ ಟೋಲ್ ಸಂಗ್ರಹಕ್ಕೆ ಮುಂದಾದರೆ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಚತುಷ್ಪಥವಾಗಿ ಮೇಲ್ದರ್ಜೆಗೇರಿರುವ ಕರಾವಳಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜನವರಿ 31 ರ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಆರಂಭವಾಗಲಿವೆ ಅದರಂತೆ ತಲಪಾಡಿ,. ಹೆಜಮಾಡಿ ಹಾಗೂ ಗುಂಡ್ಮಿ ಟೋಲ್‍ಗಳು ಸಂಗ್ರಹಕ್ಕೆ ಸಿದ್ಧವಾಗಿವೆ.

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ. ಈ ಹೊಸ ಅಧಿಸೂಚನೆಯಿಂದು ಕುಂದಾಪುರ ಕಡೆಯಿಂದ ಕಾಸರಗೋಡಿಗೆ ತೆರಳುವವರ ಇನ್ನು ನಾಲ್ಕು ಕೇಂದ್ರಗಳಲ್ಲಿ ಸುಂಕ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಲಿದ್ದಾರೆ.

ಸದ್ರಿ ಸುರತ್ಕಲ್ ಸಮೀಪದ ಎನ್‍ಐಟಿಕೆ ಪರಿಸರದಲ್ಲಿ ಒಂದು ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಇದೀಗ ಮೂರು ಟೋಲ್ ಗೇಟ್ ಕಾರ್ಯಾರಂಭಿಸಿದರೂ ಎನ್‍ಐಟಿಕೆ ಬಳಿಯಿರುವ ಟೋಲ್ ಗೇಟ್ ಅಸ್ತಿತ್ವದಲ್ಲಿÀದೆ ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ. ಕಾರು, ಜೀಪ್ ವ್ಯಾನ್ ಗಳಿಗೆ ಏಕಮುಖಿ ಸಂಚಾರಕ್ಕೆ ಕ್ರಮವಾಗಿ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ 40,30, ಹಾಗೂ 35 ರೂ. ಪಾವತಿ ಮಾಡಬೇಕಾಗುತ್ತದೆ. ದ್ವಿತೀಯ ಸಂಚಾರಕ್ಕೆ ಕ್ರಮವಾಗಿ 60,45, ಹಾಗೂ 50 ರೂ ಪಾವತಿಸಬೇಕಾಗುತ್ತದೆ.

ಬಸ್ ಮತ್ತು ಟ್ರಕ್ ಗಳಿಗೆ ಸಮಾನ ರೀತಿಯ ಸುಂಕ ನಿಗದಿಗೊಳಿಸಲಾಗಿದ್ದು, ಗುಂಡ್ಮಿಯಲ್ಲಿ ಏಕಮುಖ ಸಂಚಾರಕ್ಕೆ 130 ಮತ್ತು ದ್ವಿಮುಖ ಸಂಚಾರಕ್ಕೆ 195 ರೂ. ನಿಗದಿಗೊಳಿಸಲಾಗಿದೆ. ಹೆಜಮಾಡಿಯಲ್ಲಿ 105 ರೂ. (ಏಕಮುಖ) ಮತ್ತು 160 ರೂ. (ದ್ವಿಮುಖ) ಹಾಗೂ ತಲಪಾಡಿಯಲ್ಲಿ 110 ರೂ. (ಏಕಮುಖ) ಹಾಗೂ 165 ರೂ. (ದ್ವಿಮುಖ) ಶುಲ್ಕ ನಿಗದಿಪಡಿಸಲಾಗಿದೆ.

ಜನರು ಬೇರೆ ಬೇರೆ ರೀತಿಯಲ್ಲಿ ತೆರಿಗೆ ಪಾವತಿಸುತ್ತಿರುವ ಪ್ರಸಕ್ತ ಸಮಯದಲ್ಲಿ ಟೋಲ್ ಪಾವತಿಯು ಜನ ಸಾಮಾನ್ಯರ ಮೇಲೆ ವಿಧಿಸಿರುವ ಅವೈಜ್ಞಾನಿಕ ಹಾಗೂ ಅವರ ಮೇಲೆ ಹೊರಿಸಿರುವ ಹೊರೆಯಾಗಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ತುಂಬಾ ತೊಂದರೆಯಾಗುತ್ತದೆ. ಹಲವಾರು ಪ್ರವಾಸಿ ಕೇಂದ್ರಗಳನ್ನು ಹೊಂದಿರುವ £ಮ್ಮ ಈ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಕಡಿಮೆಯಾಗಿ ಇಲ್ಲಿನ ಆರ್ಥಿಕತೆಗೆ ದೊಡ್ಡ ಪೆಟ್ಟ್ಠಾಗುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ಮಧ್ಯೆ ಪ್ರವೇಶಿಸಿ ತುಳುನಾಡಿನ ಜನರಿಗೆ ನ್ಯಾಯ ದೊರಕಿಸಬೇಕಾದ ಅವಶ್ಯಕತೆ ಇದೆ. ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಮುಂದೆ ಆಗಬಹುದಾದ ಎಲ್ಲಾ ತೊಂದರೆಗಳಿಗೆ ಸಂಬಂಧಪಟ್ಟವರೇ ನೇರ ಹೊಣೆಗಾರರಾಗಿರುತ್ತಾರೆ. ಎಂದು ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಸಿರುತ್ತಾರೆ.


Spread the love