ಅ.12 ರಿಂದ ಮುಂಬೈ- ಮಂಗಳೂರು- ಮುಂಬೈ ಏರ್ ಇಂಡಿಯಾ ವಿಮಾನ ಸೇವೆ  ಪುನರಾರಂಭ

Spread the love

ಅ.12 ರಿಂದ ಮುಂಬೈ- ಮಂಗಳೂರು- ಮುಂಬೈ ಏರ್ ಇಂಡಿಯಾ ವಿಮಾನ ಸೇವೆ  ಪುನರಾರಂಭ

ಮಂಗಳೂರು: ಮುಂಬೈ-ಮಂಗಳೂರು ಮತ್ತು ಮಂಗಳೂರು-ಮುಂಬೈ ನಡುವೆ ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾ ತನ್ನ ನೇರ ವಿಮಾನ ಸೇವೆಯನ್ನು ಬರುವ ಸೋಮವಾರದಿಂದ (ಅ.12) ರಿಂದ ಪುನರಾರಂಭಿಸಲಿದೆ.

ಏಪ್ರಿಲ್‌ನಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಈ ಸೇವೆಯು ವಾರದಲ್ಲಿ ನಾಲ್ಕು ದಿನಗಳು ಅಂದರೆ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಲಭ್ಯವಿರಲಿದೆ. ಏರ್ ಇಂಡಿಯಾ ವಿಮಾನ ಮುಂಬೈನಿಂದ ಬೆಳಿಗ್ಗೆ 10.15 ಗಂಟೆಗೆ ಹೊರಟು ಮಧ್ಯಾಹ್ನ 12-00 ಕ್ಕೆ ಇಲ್ಲಿಗೆ ಆಗಮಿಸಲಿದೆ. ವಾಪಸ್‍ ಮಾರ್ಗದಲ್ಲಿ ಇದೇ ವಿಮಾನ ಮಧ್ಯಾಹ್ನ 12.40 ಗಂಟೆಗೆ ಹೊರಟು ಮುಂಬೈಗೆ ಮಧ್ಯಾಹ್ನ 2.20ಕ್ಕೆ ತಲುಪಲಿದೆ ಎಂದು ಸಂಸ್ಥೆಯ ಪ್ರಕಟಣೆ ಶನಿವಾರ ಇಲ್ಲಿ ತಿಳಿಸಿದೆ.

ಕೋವಿಡ್ ಸೋಂಕು ತಡೆಗೆ ಜಾರಿಗೊಳಿಸಲಾದ ಲಾಕ್‍ ಡೌನ್‍ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಕಳೆದ ಮಾರ್ಚ್ ನಿಂದ ಸ್ಥಗಿತಗೊಂಡಿದ್ದು, ಇದೀಗ ದೇಶೀಯ ಸೇವೆಗಳು (ಏರ್ ಇಂಡಿಯಾ ಮತ್ತು ಖಾಸಗಿ ವಿಮಾನಯಾನ ಕಂಪನೆಗಳು) ಹಂತ-ಹಂತವಾಗಿ ಪುನರಾರಂಭಗೊಳ್ಳುತ್ತಿವೆ.


Spread the love