ಅ. 17: ಪ್ರಮೋದ್ ಮಧ್ವರಾಜ್‍  ಹುಟ್ಟುಹಬ್ಬದ ಪ್ರಯುಕ್ತ “ಬೃಹತ್ ರಕ್ತದಾನ ಶಿಬಿರ”

Spread the love

ಅ. 17: ಪ್ರಮೋದ್ ಮಧ್ವರಾಜ್‍  ಹುಟ್ಟುಹಬ್ಬದ ಪ್ರಯುಕ್ತ “ಬೃಹತ್ ರಕ್ತದಾನ ಶಿಬಿರ”

ಉಡುಪಿ: ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರ ಹುಟ್ಟುಹಬ್ಬದ ಸಲುವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ “ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಅಕ್ಟೋಬರ್‌ 17ರಂದು  ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯ ವರೆಗೆ ನಡೆಯಲಿದೆ.

ಈ ಪ್ರಯುಕ್ತ ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ, ಅಧ್ಯಕ್ಷರು ತುಳು ಕೂಟ(ರಿ) ಉಡುಪಿ ಹಾಗೂ ಶ್ರೀ ಜನಾರ್ದನ ತೋನ್ಸೆ, ಮಾಜಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ ಇವರು ಆಗಮಿಸಲಿರುವರು ಹಾಗೂ ರಮೇಶ್ ಕಾಂಚನ್, ಅಧ್ಯಕ್ಷರು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ದಿನಕರ ಹೇರೂರು ಅಧ್ಯಕ್ಷರು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಇವರು ಉಪಸ್ಥಿತರಿರಲಿದ್ದಾರೆ.


Spread the love

Leave a Reply