ಅ.9: ಬ್ರಹ್ಮಾವರ ಬ್ಲಾಕ್ ಗೆ ಅಧ್ಯಕ್ಷರ ನೇಮಕ- ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕಾಂಗ್ರೆಸ್ ವೀಕ್ಷಕರ ಭೇಟಿ

Spread the love

ಅ.9: ಬ್ರಹ್ಮಾವರ ಬ್ಲಾಕ್ ಗೆ ಅಧ್ಯಕ್ಷರ ನೇಮಕ- ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕಾಂಗ್ರೆಸ್ ವೀಕ್ಷಕರ ಭೇಟಿ

ಬ್ರಹ್ಮಾವರ : ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಆದೇಶದ ಮೇರೆಗೆ ವೀಕ್ಷಕರಾಗಿ ನಿಯುಕ್ತಿಗೊಂಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಬಿ. ಹಿರಿಯಣ್ಣ, ರಾಜು ಪೂಜಾರಿ ಹಾಗೂ ಪ್ರಖ್ಯಾತ್ ಶೆಟ್ಟಿಯವರು ಅಗೋಸ್ತ್ 9 ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರ ಹಾಗೂ ಮುಖಂಡರುಗಳ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಬ್ರಹ್ಮಾವರ ಬ್ಲಾಕಿನ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿರಬೇಕೆಂದು ಬ್ರಹ್ಮಾವರ ಬ್ಲಾಕಿನ ಮಾಜಿ ಅಧ್ಯಕ್ಷರಾದ ಹೆಚ್. ನಿತ್ಯಾನಂದ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love