ಆರ್.ಟಿ.ಐ. ಕಾರ್ಯಕರ್ತ ವಿನಾಯಕ ಬಾಳಿಗ ತಂದೆ ರಾಮಚಂದ್ರ ಬಾಳಿಗಾ ನಿಧನ

Spread the love

ಆರ್.ಟಿ.ಐ. ಕಾರ್ಯಕರ್ತ ವಿನಾಯಕ ಬಾಳಿಗ ತಂದೆ ರಾಮಚಂದ್ರ ಬಾಳಿಗಾ ನಿಧನ

ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಆರ್.ಟಿ.ಐ. ಕಾರ್ಯಕರ್ತ ವಿನಾಯಕ್ ಬಾಳಿಗಾ ಅವರ ತಂದೆ ರಾಮಚಂದ್ರ ಬಾಳಿಗಾ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ.

ರಾಮಚಂದ್ರ ಬಾಳಿಗಾ ಅವರು ತಮ್ಮ ಮಗನ ಕೊಲೆಗೆ ನ್ಯಾಯ ದೊರಕಬೇಕು ಎಂದು ಸತತ ಹೋರಾಟ ನಡೆಸುತ್ತಿದ್ದರು. ತನ್ನ ಮಗ ವಿನಾಯಕ ಬಾಳಿಗಾ ಕೊಲೆಗೆ ಸೂಕ್ತ ನ್ಯಾಯ ಕೋರಿ ಸುಪ್ರೀಂ ಕೋರ್ಟಿನ ಮೆಟ್ಟಿಲು ಸಹ ಏರಿದ್ದರೂ ಸಹ ಯಾವುದೇ ಪ್ರಯೋಜನ ಸಿಕ್ಕಿಲ್ಲ ಎಂಬ ಕೊರಗು ಅವರಿಗಿತ್ತು. ಅವರ ಪತ್ನಿ ಕೂಡ ಕಳೆದ ವರ್ಷ ಸಾವನಪ್ಪಿದ್ದರು.

ರಾಮಚಂದ್ರ ಬಾಳಿಗರಿಗೆ ನಾಲ್ಕು ಮಂದಿ ಪುತ್ರಿಯರಿದ್ದು, ಶ್ವೇತಾ, ಉಷಾ, ಅನುರಾಧ ಮತ್ತು ಹರ್ಷ. ಅವರಲ್ಲಿ ಅನುರಾಧ ಮತ್ತು ಹರ್ಷ ಮದುವೆಯಾಗದೆ ತನ್ನ ಸಹೋದರ ವಿನಾಯಕ ಬಾಳಿಗರ ಕೊಲೆಗೆ ನ್ಯಾಯ ಲಭಿಸಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಜೂನ್ 22 ರ ಬೆಳಿಗ್ಗೆ 10 ಗಂಟೆಗೆ ಬೋಳಾರ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.


Spread the love