ಆಳ್ವಾಸ್‍ನಲ್ಲಿ ಆರೋಗ್ಯ ರಕ್ಷಣೆ ಕುರಿತು ರಾಷ್ಟ್ರೀಯ ಸಮ್ಮೇಳನ

Spread the love

ಆಳ್ವಾಸ್‍ನಲ್ಲಿ ಆರೋಗ್ಯ ರಕ್ಷಣೆ ಕುರಿತು ರಾಷ್ಟ್ರೀಯ ಸಮ್ಮೇಳನ – ಪ್ರತಿಯೊಂದು ಸಸ್ಯದ ವೈದ್ಯಕೀಯ ಗುಣಗಳ ದಾಖಲೀಕರಣ ಅಗತ್ಯ: ಡಾ. ಸಿ. ಕೆ. ಕೆ. ನಾಯರ್

ಮೂಡಬಿದಿರೆ: “ನಾವೆಲ್ಲರೂ ನಮ್ಮ ಆರೋಗ್ಯ ರಕ್ಷಣೆಗಾಗಿ ಶೇ.80ರಷ್ಟು ಗಿಡಗಳ ಮೇಲೆ ಅವಲಂಬಿತರಾಗಿದ್ದೇವೆ. ನಾವು ಸೇವಿಸುವ ಶೇ.25ರಷ್ಟು ಅಲೋಪತಿ ಔಷಧಿಗಳು ಸಸ್ಯಾಂಶವನ್ನು ಹೊಂದಿವೆ. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ಇಂಥಹ ಸಸ್ಯಗಳ ವೈದ್ಯಕೀಯ ಗುಣಗಳ ದಾಖಲೀಕರಣ ತುಂಬಾ ಮುಖ್ಯ” ಎಂದು ಕೇರಳದ ಕೋತಮಂಗಲಂ ಸೇಂಟ್ ಗ್ರೇಗೋರಿಯಸ್ ಡೆಂಟಲ್ ಕಾಲೇಜು ಹಾಗೂ ಸಂಶೋಧನಾಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಸಿ. ಕೆ. ಕೆ. ನಾಯರ್ ಪ್ರತಿಪಾದಿಸಿದರು.

ಆಳ್ವಾಸ್ ಕಾಲೇಜಿನ ಜೈವಿಕತಂತ್ರಜ್ಞಾನ ವಿಭಾಗ ಹಾಗೂ ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ಆಳ್ವಾಸ್ ಜೈವಿಕ ತಂತ್ರಜ್ಞಾನ ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಸಭಾಂಗಣದಲ್ಲಿ ಶನಿವಾರ “ಸೆಕೆಂಡರಿ ಮೆಟಬಾಲಿಟ್ಸ್ ಆ್ಯಂಡ್ ಹೆಲ್ತ್‍ಕೇರ್ ” ಎಂಬ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಹಿಂದಿನ ಕಾಲದಲ್ಲಿ ಶಾರೀರಿಕವಾಗಿ ಯಾವುದೇ ಸಮಸ್ಯೆ ಎದುರಾದರೂ ಮನೆಯಲ್ಲಿಯೇ ಔಷಧಿ ಮಾಡಿ ಸೇವಿಸುವ ಪರಿಪಾಠವಿತ್ತು. ಆಸ್ಪತ್ರೆ ಎಂಬ ಪರಿಕಲ್ಪನೆಯೇ ಇರದಿದ್ದ ಸಮಯದಲ್ಲಿ ಆರೋಗ್ಯರಕ್ಷಣೆಯ ವಿಧಾನಗಳನ್ನು ನಮ್ಮ ಹಿರಿಕರು ಅರಿತಿದ್ದರು. ಆದರೆ ಇಂದು ನಾವು ಅವುಗಳನ್ನು ಕಡೆಗಣಿಸಿ ಪ್ರಕೃತಿಯಿಂದ ದೂರಾಗಿ ಬದುಕುತ್ತಿದ್ದೇವೆ. ಇದರಿಂದ ನಮ್ಮ ಪರಿಸರವೇ ನಮ್ಮರಕ್ಷಾ ಕವಚ ಎಂಬ ಅರಿವು ನಮಗೆ ಇಲ್ಲದಂತಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ದಾಖಲೀಕರಣ ವಿದ್ಯಾರ್ಥಿಗಳ ಹೊಣೆ

“ನಮ್ಮ ಸುತ್ತಮುತ್ತ ಇರುವ ಪ್ರತಿಯೊಂದು ಸಸ್ಯಕೂಡ ಒಂದಲ್ಲಾ ಒಂದು ಔಷಧೀಯ ಗುಣವನ್ನು ಹೊಂದಿರುತ್ತದೆ. ಇದರಜ್ಞಾನ ನಮಗಿಲ್ಲ ಅಷ್ಟೇ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಎಲ್ಲಾ ಸಸ್ಯಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಹಾಕಿ ಅದನ್ನು ದಾಖಲೀಕರಿಸಲು ಮುಂದಾಗಬೇಕು. ಇಂಥಹ ಗಿಡಗಳ ಮೇಲೆ ಹೆಚ್ಚೆಚ್ಚು ಸಂಶೋಧನೆಗಳು ಜರುಗುವಂತಾಗಬೇಕು” ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ “ಸೆಕೆಂಡರಿ ಮೆಟಬಾಲಿಟ್ಸ್ ಮಾನವನ ದೈನಂದಿನ ಬದುಕಿಗೆ ಆಧಾರವಾಗಿದೆ. ಭವಿಷ್ಯದಲ್ಲಿಇದುಒಂದು ಉತ್ತಮ ಸಂಶೋಧನಾಕ್ಷೇತ್ರವಾಗಿ ರೂಪುಗೊಳ್ಳಲಿದೆ. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು” ಎಂದು ತಿಳಿಸಿದರು.

ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒಂದು ದಿನ ನಡೆದ ಈ ಸಮ್ಮೇಳನದಲ್ಲಿ 9 ಸಂಪನ್ಮೂಲ ವ್ಯಕ್ತಿಗಳು ಮುಖ್ಯ ಪರಿಕಲ್ಪನೆಯಇತರ ಆಯಾಮಗಳ ಕುರಿತುತಮ್ಮ ವಿಷಯ ಮಂಡಿಸಿದರು. ಕೇರಳ ಕಣ್ಣೂರು, ಮಂಗಳೂರು, ಉಜಿರೆ ಸೇರಿದಂತೆ ಅನೇಕ ಭಾಗಗಳ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡರು. ವಿಷಯದ ಕುರಿತಾದ ಸುಮಾರು 31 ಭಿತ್ತಿಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಕುರಿತಾದ ಅಮೂರ್ತ ಸಿ.ಡಿಯನ್ನು ಬಿಡುಗಡೆಗೊಳಿಸಲಾಯಿತು. ಮಂಗಳೂರಿನ ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ನಾಯಕ್, ಸ್ನಾತಕೋತ್ತರ ಜೈವಿಕತಂತ್ರಜ್ಞಾನ ವಿಭಾಗದ ಮುಖ್ಯಸ್ಥಡಾ. ರಾಮ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love