ಆಳ್ವಾಸ್‍ನಲ್ಲಿ ’ಓಶಿಯಾನಸ್ ಫೆಸ್ಟ್’ – ಪ್ರತಿಭೆಗಳು ಹುಟ್ಟಲು ಮತ್ತು ಬೆಳೆಯಲು ಅದ್ಭುತ ವೇದಿಕೆ -ಶೈನ್ ಶೆಟ್ಟಿ 

Spread the love

ಆಳ್ವಾಸ್‍ನಲ್ಲಿ ’ಓಶಿಯಾನಸ್ ಫೆಸ್ಟ್’ – ಪ್ರತಿಭೆಗಳು ಹುಟ್ಟಲು ಮತ್ತು ಬೆಳೆಯಲು ಅದ್ಭುತ ವೇದಿಕೆ -ಶೈನ್ ಶೆಟ್ಟಿ 

ಮೂಡುಬಿದಿರೆ: ಫೆಸ್ಟ್‍ಗಳು ವಿದ್ಯಾರ್ಥಿ ಜೀವನದಲ್ಲಿ ತುಂಬಾ ಮುಖ್ಯವಾಗುತ್ತವೆ. ಇದು ಕೊನೆಯವರೆಗೂ ಉಳಿಯುವಂತಹ ನೆನಪು ಕೂಡ ಆಗಿರುತ್ತದೆ. ಹಾಗೇ ಅನೇಕ ರೀತಿಯ ಪ್ರತಿಭೆಗಳು ಹುಟ್ಟಲು ಮತ್ತು ಬೆಳೆಯಲು ಅದ್ಭುತ ವೇದಿಕೆಯಾಗಿರುತ್ತದೆ. ಅದೇ ರೀತಿ ಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಕಾಳಜಿ ಹುಟ್ಟುವಂತಹದ್ದು ಮತ್ತು ನಾಯಕತ್ವ ಬೆಳೆಯುವುದು ಈ ರೀತಿಯ ಫೆಸ್ಟ್‍ಗಳಿಂದ ಎಂದು ಬಿಗ್‍ಬಾಸ್ 7ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಹೇಳಿದರು.

ಇವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹ್ಯೂಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ‘’ಓಶಿಯಾನಸ್ ಫೆಸ್ಟ್’’ನಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕೆ.ಎಸ್.ಸಿ.ಸಿಯ ಮ್ಯಾನೇಜಿಂಗ್ ಡೈರೆಕ್ಟರ್ ಎನ್.ರಾಮಕೃಷ್ಣ ಮಾತನಾಡಿ ಪ್ರಸ್ತುತ ಕಾಲಗಟ್ಟದಲ್ಲಿ ಜಗತ್ತು ಸಂಪೂರ್ಣ ಮಾಲಿನ್ಯದಿಂದ ಮುಳುಗಿ ಹೋಗಿದೆ. ಇದಕ್ಕೆಲ್ಲಾ ಕಾರಣ ಮಾನವ. ಸಮಾಜವು ಮನುಷ್ಯನ ಅಗತ್ಯಕ್ಕಿಂತ ಹೆಚ್ಚನ್ನು ನೀಡುತ್ತಿದೆ. ಆದರೆ ಮಾನವನಿಗೆ ಸಮಾಜದ ಬಗ್ಗೆ ಧನ್ಯತಾ ಭಾವನೆಯೇ ಇಲ್ಲದೇ ಎಲ್ಲವನ್ನು ನಶಿಸುತ್ತಿದ್ದಾನೆ. ಇಂದು ಮಾನವನ ಸ್ವಾರ್ಥದಿಂದಾಗಿ ಎಲ್ಲಾ ಜೀವ ಸಂಕುಲಗಳು ನೋವನ್ನು ಅನುಭವಿಸುತ್ತಿವೆ. ಇದನ್ನು ಸರಿಪಡಿಸಬೇಕಾದರೆ ಮುಖ್ಯವಾಗಿ ಪರಿಸರದ ಬಗ್ಗೆ ಕಾಳಜಿ ಹೊಂದಬೇಕು ಹಾಗೂ ಅನೇಕರೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ಮಾಡಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕು. ಆಗ ಮಾತ್ರ ಪಕೃತಿಯಲ್ಲಿರುವ ನೈಸರ್ಗಿಕ ವಸ್ತುಗಳು ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ. ಈ ಹಂತದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೆಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ, ಬಾಲಕೃಷ್ಣ ಶೆಟ್ಟಿ, ಕಲಾ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಫ್ಯಾಕಲ್ಟಿ ಸಂಯೋಜಕಿ ಪೂರ್ಣಿಮ, ವನ್ಯ ಜೀವಿ ಛಾಯಾಗ್ರಹಕ ವ್ರಿಜುಲಾಲ್ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಪ್ರಣವ್ ಶಿವಕುಮಾರ್, ತೇಜು ಆರ್ ಉಪಸ್ಥಿತರಿದ್ದರು.


Spread the love