ಆಳ್ವಾಸ್‍ನಲ್ಲಿ `ವೀಕ್ಷಣಾ- 2019′ ಕಾರ್ಯಗಾರ

ಆಳ್ವಾಸ್‍ನಲ್ಲಿ `ವೀಕ್ಷಣಾ- 2019′ ಕಾರ್ಯಗಾರ

ಮೂಡಬಿದಿರೆ: “ಉತ್ತಮರಾಷ್ಟ್ರ ನಿರ್ಮಾಣದಲ್ಲಿ ಆರ್ಥಿಕ ಕ್ಷೇತ್ರದ ಕೊಡುಗೆ ಅಪಾರವಾದದ್ದು. ಅದರಂತೆ ಈ ಕ್ಷೇತ್ರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿ ಮತ್ತುಅಭಿವೃದ್ಧಿ ಪಡಿಸುವಲಿ ್ಲಚಾರ್ಟೆರ್ಡ್ ಆಕೌಂಟೆಂಟ್‍ಗಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ” ಎಂದು ಐ.ಸಿ.ಎ.ಐ ನ ಎಸ್.ಐ.ಆರ್.ಸಿ. ಮಂಗಳೂರು ವಿಭಾಗದ ಅಧ್ಯಕ್ಷರಾದ ಚಾರ್ಟೆಡ್‍ಅಕೌಂಟೆಂಟ್ ಕೆ. ಅನಂತ ಪದ್ಮನಾಭ ಅಭಿಪ್ರಾಯಪಟ್ಟರು.

ಆಳ್ವಾಸ್ ಕಾಲೇಜಿನಲ್ಲಿ ಮಂಗಳೂರು ವಿಭಾಗದ ಐ.ಸಿ.ಎ.ಐ ನ ಎಸ್.ಐ.ಆರ್.ಸಿ. ಹಾಗೂ ಐ.ಸಿ.ಎ.ಐ ನ ಸಿಕಾಸ ವತಿಯಿಂದ ಸಿ.ಎ. ವಿದ್ಯಾರ್ಥಿಗಳಿಗಾಗಿ ನಡೆದ `ವೀಕ್ಷಣಾ 2019′ ಒಂದು ದಿನದ ಸಿ.ಎ. ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

“ಯಾವುದೇ ವಿಷಯಗಳ ಕುರಿತು ಆಸಕ್ತಿ, ತಂತ್ರಜ್ಞಾನಗಳ ಬಗೆಗೆ ಮಾಹಿತಿ ಹಾಗೂ ಪ್ರಸಕ್ತ ವಿಷಯಗಳ ಕುರಿತು ಸೂಕ್ತ ಜ್ಞಾನ ಸಿ.ಎ. ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಅಲ್ಲದೇ ನೂತನ ವಿಷಯಗಳಿಗೆ ಎಷ್ಟು ತೆರೆದುಕೊಂಡಿರುತ್ತೇವೆಯೋ, ಅಷ್ಟು ನಾವು ಪ್ರಸ್ತುತವಾಗಿ ಉಳಿಯುತ್ತೇವೆ. ಈ ಎಲ್ಲಾ ಅಂಶಗಳಿಂದ ನಮ್ಮಲ್ಲಿರುವ ಕೌಶಲ್ಯವನ್ನು ವ್ಯಕ್ತಪಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ” ಎಂದರು.

ಮಂಗಳೂರು ವಿಭಾಗದ ಐ.ಸಿ.ಎ.ಐ ನ ಸಿಕಾಸದ ಅಧ್ಯಕ್ಷ ಸಿ.ಎ. ಪ್ರಸನ್ನ ಶೆಣೈ ಎಮ್ ಮಾತನಾಡಿ “ಸಂವಹನ ಕೌಶಲ್ಯವು ಸಿ.ಎ ಕ್ಷೇತ್ರಕ್ಕೆ ಪ್ರಮುಖವಾದ ಅಂಶವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಆ ಕಲೆಯನ್ನು ಬೆಳೆಸಿಕೊಂಡರೆ, ಅದು ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ” ಎಂದು ತಿಳಿಸಿದರು.

ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ “ಸಿ.ಎಗಳು ಭವಿಷ್ಯದಲ್ಲಿ ದೇಶದ ಆರ್ಥಿಕತೆಯನ್ನು ಸಂರಕ್ಷಿಸುವ ಸೈನಿಕರಿದ್ದಂತೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ, ನಿಮ್ಮ ಚೌಕಟ್ಟಿನಿಂದ ಹೊರಬಂದು ಕಾರ್ಯನಿರ್ವಹಿಸಬೇಕಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಾಣಿಜ್ಯ ವಿಭಾಗದ ಡೀನ್ ಪ್ರೋ. ಉಮೇಶ್ ಶೆಟ್ಟಿ, ಉಪನ್ಯಾಸಕರಾದ ಅನಂತಶಯನ ಉಪಸ್ಥಿತರಿದ್ದರು. ಜೋವಿಟಾ ಸ್ವಾಗತಿಸಿ, ಧೀರಜ್ ವಂದಿಸಿ, ಅನುಷಾ ಐತಾಳ್ ಕಾರ್ಯಕ್ರಮ ನಿರೂಪಿಸಿದರು.