ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದಿಂದ ‘ಉಡುಪಿ ಪರ್ಯಾಯ ನಮ್ಮ ಪರ್ಯಾಯ’ ಪೂರ್ವಭಾವಿ ಸಭೆ
ಉಡುಪಿ: ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದ ವತಿಯಿಂದ “ಉಡುಪಿ ಪರ್ಯಾಯ ನಮ್ಮ ಪರ್ಯಾಯ” ಎಂಬ ಆಶಯದೊಂದಿಗೆ ಪ್ರಥಮ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ದಿ. ಆಸ್ಕರ್ ಫರ್ನಾಂಡಿಸ್ ಅವರ “ಸರ್ವಜಾತಿ, ಸರ್ವಧರ್ಮವನ್ನೊಳಗೊಂಡ” ಪರ್ಯಾಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸಭೆ ನಡೆಯಿತು.
ಸಭೆಯಲ್ಲಿ ಪರ್ಯಾಯೋತ್ಸವದ ಅಂಗವಾಗಿ ಕುಣಿತ ಭಜನೆ, ಯಕ್ಷಗಾನ, ಕೃಷ್ಣ ವೇಷ ಸ್ಪರ್ಧೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಆಯ್ದ ವ್ಯಕ್ತಿಗಳನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ನಾಡಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಬೇಕು ಹಾಗೂ ಅದಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಸಭೆಯ ಅಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅದೇ ವೇದಿಕೆಯಲ್ಲಿ ಕೇಕ್ ಕತ್ತರಿಸಿ ಹಬ್ಬವನ್ನು ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಆಗಮಿಸಿದ್ದ ಆಸ್ಕರ್ ಫರ್ನಾಂಡಿಸ್ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿ, ಪರ್ಯಾಯ ದಿನದ ಕಾರ್ಯಕ್ರಮಗಳ ಜೋಡಣೆ ಮತ್ತು ರೂಪುರೇಷೆಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿದರು.

ಮುಖಂಡರಾದ ಯತೀಶ್ ಕರ್ಕೇರ, ಮುರುಳಿ ಶೆಟ್ಟಿ, ರಾಜಶೇಖರ್ ಕೋಟ್ಯಾನ್ , ಜಯವಂತ್ ರಾವ್, ರೊನಾಲ್ಡ್ ಪ್ರವೀಣ್ ಕುಮಾರ್, ಪ್ರಖ್ಯಾತ್ ಶೆಟ್ಟಿ, ಕೇಶವ್ ಕೋಟ್ಯಾನ್, ರಮೇಶ್ ಕಾಂಚನ್, ವಿಶ್ವಾಸ್ ಅಮೀನ್, ನವೀನ್ ಸಾಲಿಯಾನ್, ಶಶಿಧರ್ ಶೆಟ್ಟಿ, ಚಂದ್ರಮೋಹನ್, ಅಬ್ದುಲ್ ಹಮೀದ್ ಉದ್ಯಾವರ, ಜಯಶ್ರೀ ಶೇಟ್, ದಿನೇಶ್ ಸುವರ್ಣ ಶಿರ್ವ, ಸೂರ್ಯ ಸಾಲಿಯಾನ್, ರೂಪೇಶ್ ಕಲ್ಮಾಡಿ, ಅಕ್ಷತ್ ಪೈ , ತಕ್ಷತ್ ಪೈ, ಸುರೇಂದ್ರ ರಾವ್ . ಕುಮಾರ್ ಬೈಕಾಡಿ, ಮ್ಯಾಕ್ಷಿಮ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.












