ಇಂದಿರಾ ಗಾಂಧಿ ವಿಶ್ವದ ಶಕ್ತಿಶಾಲಿ ನಾಯಕಿಯಾಗಿದ್ದವರು – ಸಚಿವ ಆರ್. ಬಿ. ತಿಮ್ಮಾಪುರ

Spread the love

ಇಂದಿರಾ ಗಾಂಧಿ ವಿಶ್ವದ ಶಕ್ತಿಶಾಲಿ ನಾಯಕಿಯಾಗಿದ್ದವರು – ಸಚಿವ ಆರ್. ಬಿ. ತಿಮ್ಮಾಪುರ

ಉಡುಪಿ: ವಿಶ್ವದ ಶಕ್ತಿಶಾಲಿ ನಾಯಕಿಯಾಗಿ ,ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನಿಡುವುದರ ಮೂಲಕ ಕೋಟ್ಯಂತರ ಬಡಜನರ ಹೃದಯದಲ್ಲಿ ಇಂದಿರಮ್ಮನಾಗಿ ಸ್ಥಾನ ಪಡೆದಿರುವ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವೆನಿಸುತ್ತದೆ ಎಂದು ಕರ್ನಾಟಕ ರಾಜ್ಯ ಅಬಕಾರಿ ಸಚಿವರಾಗಿರುವ ಬಿ. ಆರ್. ತಿಮ್ಮಾಪುರ ಅವರು ಹೇಳಿದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಆಯೋಜಿಸಿದ್ದ ಇಂದಿರಾಗಾಂಧಿ ಅವರ 106ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ಇಂದಿರಾಗಾಂಧಿ ಅನ್ನುವ ಹೆಸರೇ ನಮಗೆಲ್ಲಾ ಶಕ್ತಿಯನ್ನು ತುಂಬಿಸುತ್ತದೆ. ಅವರು ಹಾಕಿಕೊಟ್ಟ ಹಲವಾರು ಜನಪರ ಕಾರ್ಯಕ್ರಮಗಳು ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಹಿಳಾ ಕಾಂಗ್ರೆಸ್ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಾರ್ಡ್ ಗಳಿಗೆ ಅಗತ್ಯವಿರುವ ಹತ್ತು ಗೋಡೆ ಗಡಿಯಾರಗಳನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.

ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಕಾರ್ಕಳದ ಸಮಾಜ ಸೇವಕಿ, ಸುರಕ್ಷಾ ಸೇವಾಶ್ರಮದ ಸ್ಥಾಪಕಿ ಆಯಿಷಾ ಬಾನು ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಯನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರದಾನ ಮಾಡಲಾಯಿತು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಸರ್ವರನ್ನೂ ಸ್ವಾಗತಿಸಿದರು.ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು..

ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ಅವರು ಧನ್ಯವಾದವಿತ್ತರು. ಶ್ರೀಮತಿ ಜ್ಯೋತಿ ಹೆಬ್ಬಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

ಪಕ್ಷದ ಹಿರಿಯ ನಾಯಕರಾದ ಸರಸು.ಡಿ.ಬಂಗೇರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ನರಸಿಂಹ ಮೂರ್ತಿ, ನಾಗೇಶ್ ಕುಮಾರ್ ಉದ್ಯಾವರ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರಾದ ದಿನಕರ್ ಹೇರೂರು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೇಬೈಲ್, ಇಂಟಕ್ ಅಧ್ಯಕ್ಷರಾದ ಕಿರಣ್ ಹೆಗ್ಡೆ, ಆರ್ ಜಿಪಿಆರ್ ಎಸ್ ಜಿಲ್ಲಾ ಸಂಯೋಜಕಿ  ರೋಶನಿ ಒಲಿವರ್, ಡಾ.ಸುನೀತಾ ಶೆಟ್ಟಿ, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸುಲೋಚನಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಐಡಾ ಗಿಬ್ಬ ಡಿ’ಸೋಜಾ, ಶಾಲಿನಿ ಪುರಂದರ್, ಸುಕನ್ಯಾ ಪೂಜಾರಿ ಕಡೇಕಾರ್, ಸಂಧ್ಯಾ ತಿಲಕ್ ರಾಜ್,ಅರ್ಚನಾ ದೇವಾಡಿಗ, ಪ್ರಮೀಳಾ ಜತ್ತನ್ನ, ಗೀತಾ ಸತೀಶ್,ಸತೀಶ್ ಕೊಡವೂರು, ಸುರೇಂದ್ರ ಆಚಾರ್ಯ,ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷ ಜಯಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ವಿದ್ಯಾರ್ಥಿ ಸಂಘಟನೆಯ ಸೌರಭ್ ಬಳ್ಳಾಲ್, ಮಹಾಬಲ ಕುಂದರ್, ಲಕ್ಷ್ಮೀ ಭಟ್, ಶಾಂತಿ ಪಿರೇರಾ, ನಳಿನಾಕ್ಷಿ ಬಂಗೇರ, ಪ್ರಮೀಳಾ, ಆಶಾ ಚಂದ್ರಶೇಖರ್, ಜಾನಕಿ ನಾಯ್ಕ್, ಕುಮುದಾ, ವಜ್ರಾಕ್ಷಿ, ದೇವಕಿ ಕೋಟ್ಯಾನ್, ಜಯಶ್ರೀ ಶೇಟ್ , ಸುಮನಾ ಸುರೇಂದ್ರ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply