ಇಫ್ಕಾ ಮತ್ತು ಕರಾವಳಿ ಕ್ರಿಸ್ಚಿಯನ್ ಚೇಂಬರ್ ಆಫ್ ಕಾಮರ್ಸ್ ‘ ಪ್ರೆರಣಾ’ ದಿಂದ ಸಾಧಕರಿಗೆ ಸನ್ಮಾನ

Spread the love

ಇಫ್ಕಾ ಮತ್ತು ಕರಾವಳಿ ಕ್ರಿಸ್ಚಿಯನ್ ಚೇಂಬರ್ ಆಫ್ ಕಾಮರ್ಸ್ ‘ ಪ್ರೆರಣಾ’ ದಿಂದ ಸಾಧಕರಿಗೆ ಸನ್ಮಾನ 

ಉಡುಪಿ :  ಉಡುಪಿಯ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ &  ಇಂಡಸ್ಟ್ರಿ [ಪ್ರೇರಣಾ] ಇದರ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಂಸ್ಥೆಯ ಸದಸ್ಯರಾದ , ಉಡುಪಿ ಜಿಲ್ಲಾ ಕ್ರೆಡಾಯ್ [CREDAI] ಸಂಸ್ಥೆಗೆ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಜೆರ್ರಿ ವಿನ್ಸೆಂಟ್ ಡಯಾಸ್, ಕಾರ್ಯದರ್ಶಿ ಯಾಗಿ ಆಯ್ಕೆ ಗೊಂಡ   ಜೋಯನ್ ಲೂವಿಸ್ ಹಾಗೂ ಕ್ರಿಶ್ಚಿಯನ್ ಡೆವಲಪ್ಮೆಂಟ್ ಕೌನ್ಸಿಲ್-ಕರ್ನಾಟಕ ಸರಕಾರ ಇದರ ಸದಸ್ಯರಾಗಿ ಆಯ್ಕೆ ಯಾದ  ಬಿಗ್ ಜೆ ಮೀಡಿಯಾದ ಸ್ಥಾಪಕ ಪ್ರಶಾಂತ್ ಜತ್ತನ್ನ ಇವರು ಮೂವರನ್ನು ಇಂಟರ್ನೇಶನಲ್ ಫೆಡರೇಶನ್ ಆಫ್ ಕ್ರಿಶ್ಚಿಯನ್ [ಇಫ್ಕಾ] ಹಾಗೂ ‘ಪ್ರೇರಣಾ’ದ ಪರವಾಗಿ ನಡೆದ  ಸಮಾರಂಭದಲ್ಲಿ ಸನ್ಮಾನಿಸಲಾಯಿತು

 

ಸನ್ಮಾನಿತರನ್ನು ಸಭೆಗೆ ಪರಿಚಯಿಸಿದ ಮತ್ತು ಅಭಿನಂದಿಸಿದ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನೇರಿ ಕರ್ನೆಲಿಯೋ ಸನ್ಮಾನಿತರಿಗೆ  ದೊರೆತ ಹುದ್ದೆಗಳನ್ನು ಉತ್ತಮವಾಗಿ ನಿಭಾಯಿಸಿ ಜನಪರ ಕಾರ್ಯಗಳ ಮೂಲಕ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ದೇವರು ಕರುಣಿಸಲಿ ಎಂದು ಹಾರೈಸಿದರು

ಸನ್ಮಾನಿತರಾದ  ಪ್ರಶಾಂತ್ ಜತ್ತನ್ನ ಮಾತನಾಡಿ  ಕ್ರೈಸ್ತರು ರಾಜಕೀಯ ದಿಂದ ದೂರ ಉಳಿಯದೆ ಊರಿನಲ್ಲಿ ಸಕ್ರಿಯವಾಗಿ ತೊಡಗಿ, ತಮ್ಮ ಮಕ್ಕಳನ್ನು ಸರಕಾರೀ ಸೇವೆಗಳಿಗೆ ಸೇರಿಸಲು ಮುತುವರ್ಜಿ ವಹಿಸಬೇಕೆಂದರು. ಸಮಾಜ ಸೇವೆ ಮಾಡುವ ಮೂಲಕವೂ ತಮ್ಮ ಅಸ್ತಿತ್ವವನ್ನು ತೋರಿಸಿ ಈ ದೇಶದ ಅಭಿವ್ರಿದ್ದಿಯಲ್ಲಿ ಸಮಪಾಲು ನೀಡಬೇಕು ಎಂದರು.

ಪ್ರಾರಂಭದಲ್ಲಿ ಪ್ರೆರಣಾ ದ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವ ಅವರು ಸರ್ವರನ್ನು ಸ್ವಾಗತಿಸಿದರು .ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್ ರವರು ಧನ್ಯವಾದ ಅರ್ಪಿಸಿದರು

ಜಿಲ್ಲಾ ಪಂಚಾಯತ್ ಸದಸ್ಯರಾದ ವಿಲ್ಸನ್ ರಾಡ್ರಿಗಾಸ್, ಇಫ್ಕಾ ದ ಸದಸ್ಯರಾದ ನೆರಿ ಕರ್ನೆಲಿಯೋ, ಲುವಿಸ್ ಲೋಬೋ ರವರೊಂದಿಗೆ SVPF ಅಧ್ಯಕ್ಷ ಡೊನಾಲ್ಡ್ ಸಲ್ದಾನ, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ   ಡಾಲ್ಫಿ ಲುವಿಸ್, ವರ್ಲ್ಡ್ ಆಫ್ ಟೈಟನ್ ನ ಮ್ಯಾಕ್ಸಿಮ್ ಸಲ್ದಾನ, ರೀಗಲ್ ಬಿಲ್ದರ್ಸ್ ನ ಟೆರೆನ್ಸ್ ಸುವರಿಸ್, ಕಾರ್ಕಳದ ಉದ್ಯಮಿಗಳಾದ ಜೋಯೆಲ್ ಮಥಾಯಸ್, ಪ್ರಕಾಶ್ ಪಿಂಟೋ ಮತ್ತು ಇತರ ಸದಸ್ಯರು ಹಾಜರಿದ್ದರು.


Spread the love