ಇಸ್ಪೀಟು ಅಕ್ರಮ ಜುಗಾರಿ ಅಡ್ಡೆಗೆ ದಾಳಿ 44 ಮಂದಿ ಬಂಧನ

ಇಸ್ಪೀಟು ಅಕ್ರಮ ಜುಗಾರಿ ಅಡ್ಡೆಗೆ ದಾಳಿ 44 ಮಂದಿ ಬಂಧನ

ಮಂಗಳೂರು :ಪಣಂಬೂರು ಠಾಣಾ ಸರಹದ್ದಿನ ಬೈಕಂಪಾಡಿ ಮೀನಕಳಿಯಾ ರಸ್ತೆಯ ಎಡಭಾಗ ಕಾಡುಪೊದರು ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 44 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 75,870/- ,ಇಸ್ಪೀಟ್ ಎಲೆಗಳು-52ಮತ್ತುಕ್ಯಾಂಡಲ್ ,ನ್ಯೂಸ್ ಪೇಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮೊಹಮ್ಮದ್ಶರೀಫ್, ರಾಮಪ್ಪ, ಪ್ರಕಾಶ ಭಂಡಾರಿ, ದೇವೆಂದ್ರ, ಗಂಗಾಧರ್, ಬರಮಗೌಡ, ವಜೀರ್, ಲತೀಶ್, ಮಂಜಣ್ಣ, ಅಬ್ದುಲ್ಲಾ, ನಾರಾಯಣ, ಪ್ರಶಾಂತ್, ಉಮಾಮಂಜಿ, ರಮೇಶ್, ಐವನ್ ಡಿಸೋಜಾ, ಹೆಗ್ಗಪ್ಪ, ನಾಗೇಶ್, ಮೊಹಮದ್ಹನೀಪ್, ಬಾಲಪ್ಪ, ಶಿವಾನಂದ, ಅಬ್ದುಲ್ರೆಹಮಾನ್, ಅಬ್ದುಲ್ರೆಹಮಾನ್, ರಾಜು, ಪ್ರಶಾಂತ್, ಲೋಕನಾಥ, ಯೋಗಿಶ್, ಸಚಿನ್, ಪ್ರವೀಣ್ನಾಯಕ್, ಪ್ರವೀಣ್ಚಿಮ್ಮಲ್, ಶಿವಾನಂದಪ್ಪಬಂಗಾರಿ, ಹರೀಶ್ ಸುವರ್ಣ, ನಾರಾಯಣಕಾನ, ಕರೀಂ, ಅಶ್ರಫ್, ಕಳಕಪ್ಪಬೇನಕಟ್ಟಿ, ಮೊಹಮ್ಮದ್ಶರೀಫ್, ಹರಾಧನ್ಉರಾಂವ್, ಮಂಜುನಾಥ, ವಿಷ್ಣುದಾಸ್, ಮಳೆಯಪ್ಪಸಿದ್ದಪ್ಪಕಂಬಾರ್, ಬಸಪ್ಪಪತ್ರ್ಯಪ್ಪಕೊಟಗಿ, ಮಂಜುನಾಥ, ಪ್ರಭಯ, ರಾಜು ಎಂದು ಗುರುತಿಸಲಾಗಿದೆ.

ಪ್ರಕರಣದ ಪತ್ತೆಕಾರ್ಯವನ್ನು ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ ಗೌಡ, ಐ.ಪಿ.ಎಸ್, ರವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪಿ.ಐ ರಫೀಕ್ ಕೆ.ಎಮ್, ಪಿ.ಎಸ್.ಐ ಉಮೇಶ್ ಕುಮಾರ್.ಎಂ.ಎನ್ ಹಾಗೂ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.