ಇಸ್ಪೀಟು ಜುಗಾರಿ: ಏಳು ಮಂದಿಯ ಬಂಧನ

Spread the love

ಇಸ್ಪೀಟು ಜುಗಾರಿ: ಏಳು ಮಂದಿಯ ಬಂಧನ

ಉಪ್ಪಿನಂಗಡಿ: ಹಣ ಪಣಕ್ಕಿಟ್ಟು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಮರ್ಜಾಳ ಎಂಬಲ್ಲಿ ಉಲಾಯಿ-ಪಿದಾಯಿ ಇಸ್ಪೀಟ್ ಆಡುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಗದು-ವಾಹನಗಳ ಸಹಿತ 2.31 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಣ್ಣೀರುಪಂಥ ನಿವಾಸಿ ಸುಂದರ ಆಚಾರಿ(35), ಲಕ್ಷ್ಮಣ(35), ಸತೀಶ್(40), ನವೀನ್(42), ಆದಂ(42), ಇಕ್ಬಾಲ್(38) ಹಾಗೂ ಮುಹಮ್ಮದ್ ಶಾಫಿ(23) ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love