ಉಚಿತ ಎಲ್‍ಪಿಜಿ ವಿಸ್ತರಣೆ ಬಡವರಿಗೆ ಕೇಂದ್ರದ ವರದಾನ : ನಳಿನ್‍ಕುಮಾರ್ ಕಟೀಲ್ 

Spread the love

ಉಚಿತ ಎಲ್‍ಪಿಜಿ ವಿಸ್ತರಣೆ ಬಡವರಿಗೆ ಕೇಂದ್ರದ ವರದಾನ : ನಳಿನ್‍ಕುಮಾರ್ ಕಟೀಲ್ 

ಮಂಗಳೂರು : ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಈಗ ಎಲ್ಲ ಬಡ ಕುಟುಂಬಗಳಿಗೆ ವಿಸ್ತರಣೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಇದರಿಂದ ಎಲ್ಲ ಬಡ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಅಡುಗೆ ಅನಿಲ ಸಂಪರ್ಕ ಸಾಧ್ಯವಾಗಲಿದೆ ಎಂದು ದ.ಕ.ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.

2016ರಲ್ಲಿ ಜಾರಿಯಾದ ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಆಯ್ದ ಕುಟುಂಬಗಳ ಮಹಿಳಾ ಸದಸ್ಯರಿಗೆ ಮಾತ್ರ ನೀಡಲಾಗುತ್ತಿತ್ತು. ಈಗ ಎಲ್ಲ ಬಡ ಕುಟುಂಬಗಳಿಗೆ ವಿಸ್ತರಣೆಯಾಗಿದ್ದು ಬಡ ಮಹಿಳೆಯರಿಗೆ ವರದಾನವಾಗಿ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love