ಟ್ರಾಫಿಕ್ ಪೋಲಿಸ್ ಅವಾಂತರ ; ಒಳ ಚರಂಡಿಗೆ ಬಿದ್ದು ಲಾರಿ ಪಲ್ಟಿ; ಕ್ಲೀನರ್ ಮೃತ್ಯು

Spread the love

ಟ್ರಾಫಿಕ್ ಪೋಲಿಸ್ ಅವಾಂತರ ; ಒಳ ಚರಂಡಿಗೆ ಬಿದ್ದು ಲಾರಿ ಪಲ್ಟಿ; ಕ್ಲೀನರ್ ಮೃತ್ಯು

ಕೊಣಾಣೆ: ತೊಕ್ಕೊಟ್ಟು ಜಂಕ್ಷನ್ ನಲ್ಲಿ ಟ್ರಾಫಿಕ್ ಪೊಲೀಸರು ಲಾರಿ ನಿಲ್ಲಿಸಿ ಕೇಸ್ ಹಾಕಲು ಮುಂದಾದಾಗ ಎನ್ನಲಾಗಿದ್ದು, ಈ ಸಂದರ್ಭ ಚಾಲಕ ಲಾರಿ ನಿಲ್ಲಿಸದೆ ರಸ್ತೆ ಬದಿಗೆ ತೆಗೆಯುವ ಭರಾಟೆಯಲ್ಲಿ ಒಳಚರಂಡಿಗೆ ಮಗುಚಿ ಬಿದ್ದಿದ್ದು, ಲಾರಿಯ ಕ್ಲೀನರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಶಿವಮೊಗ್ಗ ನಿವಾಸಿ ವಸಂತ್ ಕುಮಾರ್ (25) ಎಂದು ಗುರುತಿಸಲಾಗಿದೆ.

ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದನ್ನು ಟ್ರಾಫಿಕ್ ಪೋಲಿಸ್ ತಡೆದು ಸೈಡ್ ನಿಲ್ಲುವಂತೆ ಸೂಚನೆ ನೀಡಿದರು, ಸಿಂಗಲ್ ರೋಡ್ ಆಗಿರುದರಿಂದ ಬೃಹತ್ ಗಾತ್ರದ ಬಾರ ಹೊತ್ತುಕೊಂಡ ಲಾರಿ ರಸ್ತೆಯ ಬದಿಗೆ ಹೋಗುತ್ತಿದ್ದಂತೆ, ಪಲ್ಟಿಯಾಯಿತು,ಕಾರಣ ರಸ್ತೆಯ ಒಂದು ಬದಿ ಇಳಿಮುಖ ವಾಗಿತ್ತು, ಲಾರಿಯಲ್ಲಿದ್ದ ವಸಂತ್ ಕುಮಾರ್ ಸಾವನ್ಬಪ್ಪಿದ್ದಾನೆ

ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವ ಟ್ರಾಪಿಕ್ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಮಾರು ಎರಡು ಗಂಟೆಗಳ ಕಾಲ ನೂರಾರು ನೂರಾರು ಮಂದಿ ಪ್ರತಿಭಟನೆ ನಡೆಸಿದರು.


Spread the love