ಉಚ್ಚಿಲ ಸಮೀಪ ಭೀಕರ ರಸ್ತೆ ಅಪಘಾತ, ಲಾರಿ ಚಾಲಕ ಸ್ಥಳದಲ್ಲೇ ಮೃತ್ಯು

Spread the love

ಉಚ್ಚಿಲ ಸಮೀಪ ಭೀಕರ ರಸ್ತೆ ಅಪಘಾತ, ಲಾರಿ ಚಾಲಕ ಸ್ಥಳದಲ್ಲೇ ಮೃತ್ಯು

ಕಾಪು: ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿಹೊಡೆದ ಪರಿಣಾಮ ಲಾರಿ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ66ರ ಉಚ್ಚಿಲ ಹನಫಿ ಮಸೀದಿ ಬಳಿ ಮಂಗಳವಾರ ಮುಂಜಾನೆ 4:30 ರ ಸುಮಾರಿಗೆ ಸಂಭವಿಸಿದೆ.

ಹುಬ್ಬಳ್ಳಿಯಿಂದ ಕಡಲೆ ಹಿಟ್ಟು ಹೇರಿಕೊಂಡು ಮಂಗಳೂರು ಕಡೆಗೆ ಚಲಿಸುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಹನಫಿ ಮಸೀದಿ ಬಳಿ ಕೆಟ್ಟು ನಿಂತಿತ್ತು. ಇದೇ ಸಂದರ್ಭದಲ್ಲಿ ಆ ಲಾರಿ ಚಾಲಕ ಕಲಘಟಗಿ ನಿವಾಸಿ ಮಹಂತೇಶ್ ಗೌಲಿ (33)ಎಂಬವರು ಲಾರಿ ಕೆಳಗಡೆ ಲಾರಿಯನ್ನು ರಿಪೇರಿ ಮಾಡುತ್ತಿದ್ದರು. ಇದೇ ವೇಳೆ ಉಡುಪಿ ಕಡೆಯಿಂದ ಮಂಗಳೂರಿನತ್ತ ನೀರುಳ್ಳಿ ಹೇರಿಕೊಂಡು ಅದೇ ದಾರಿಯಾಗಿ ಬರುತ್ತಿದ್ದ ಲಾರಿಯು ಕೆಟ್ಟು ನಿಂತ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಟ್ಟು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಅಫಘಾತದ ತೀವೃತೆಗೆ ಕೆಟ್ಟು ನಿಂತ ಲಾರಿ ಎಕ್ಸಲ್ ಸಹಿತ ನಾಲ್ಕೂ ಚಕ್ರ ಬೇರ್ಪಟ್ಟು ಲಾರಿ ನುಜ್ಜು ಗುಜ್ಜಾಗಿದೆ. ಇದೇ ವೇಳೆ ಎರಡೂ ಲಾರಿ ಮುಗುಚಿ ಬಿದ್ದಿದ್ದು, ಭೀüಭತ್ಸ ದೃಷ್ಯ ಕಂಡು ಬಂದಿದೆ. ಸ್ಥಳಕ್ಕೆ ಕೂಡಲೇ ಪಡುಬಿದ್ರಿ ಠಾಣಾಧಿಕಾರಿ ಸುಬಣ್ಣ ಮತ್ತು ಸಿಬ್ಬಂದಿ ಆಗಮಿಸಿದ್ದು ಸ್ಥಳೀಯರ ಸಹಕಾರದಿಂದ ಲಾರಿಯಲ್ಲಿದ್ದ ಸರಕುಗಳನ್ನು ಖಾಲಿಮಾಡಲಾಯಿತು. ಹೆಜಮಾಡಿ ಟೋಲ್‍ನ ಕ್ರೇನ್ ಸ್ಥಳಕ್ಕಾಗಮಿಸಿ ಹೆದ್ದಾರಿಯಲ್ಲಿ ಮುಗುಚಿ ಬಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿ ಕೊಟ್ಟಿದ್ದಾರೆ.


Spread the love