ಉಡುಪಿ: ಖೋಟಾ ನೋಟು ಚಲಾವಣೆ, ಇಬ್ಬರ ಬಂಧನ

Spread the love

ಉಡುಪಿ: ಖೋಟಾ ನೋಟು ಚಲಾವಣೆ, ಇಬ್ಬರ ಬಂಧನ

ಉಡುಪಿ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

 

ಬಂಧಿತರನ್ನು ದಾವಣಗೆರೆ ಮೂಲದ ಚೇತನ್ ಗೌಡ ಮತ್ತು ಅರ್ಪಿತಾ ಎಂದು ಗುರುತಿಸಲಾಗಿದೆ.

ಬಂಧಿತರು ಬುಧವಾರ ಕಾರ್ಕಳ ತಾಲೂಕಿನ ಕದಿಂಜೆ,ಬೆಳ್ಮಣ್,ಸಾಂತೂರ್ ಕೊಪ್ಲ ಭಾಗದಲ್ಲಿ 200 ರೂ ಮುಖ ಬೆಲೆಯ ಖೋಟಾ ನೋಟು ನೀಡಿ ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ಹುಡುಕಾಟ ಮಾಡಿದ್ದು ಕಾಪು ತಾಲೂಕಿನ ಕೋತಲ್ ಕಟ್ಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 200 ಮುಖಬೆಲೆಯ 4 ಖೋಟಾ ನೋಟು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love