ಉಡುಪಿ: ಗಾಂಜಾ ಸೇವನೆ: ಎಂಟು ಮಂದಿ ವಶಕ್ಕೆ

ಉಡುಪಿ: ಗಾಂಜಾ ಸೇವನೆ: ಎಂಟು ಮಂದಿ ವಶಕ್ಕೆ
ಉಡುಪಿ: ಗಾಂಜಾ ಸೇವನೆಗೆ ಸಂಬಂಧಿಸಿ ಉಡುಪಿ ಸೆನ್ ಹಾಗೂ ಪಡುಬಿದ್ರಿ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 8ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅ.20ರಂದು ಮಣಿಪಾಲ ಶಾಂಭವಿ ಹೆಬಿಟೆಟ್ ಬಳಿ ಹರಿಯಾಣ ರಾಜ್ಯದ ಸುಮಿತ್(21), ಮಣಿಪಾಲ ಶಾಂಭವಿ ರೆಸಿಡೆನ್ಸಿ ಬಳಿ ಬೆಳಗಾವಿಯ ಹೃಷಿಕೇಶ್ (23), ಮಣಿಪಾಲ ಎಚ್.ಪಿ. ಪೆಟ್ರೋಲ್ ಬಂಕ್ ಬಳಿ ಉದ್ಯಾವರ ಬೊಳ್ಜೆಯ ರಾಹುಲ್(22) ಮತ್ತು ಈಶ್ವರ ನಗರದ ಇಶಾನ್ ಶೆಟ್ಟಿ(21), ಮಣಿಪಾಲ ಶಾಂಭವಿ ಪ್ಯಾಲೆಸ್ ಬಳಿ ಉಡುಪಿ ನಿವಾಸಿ ಸಿದ್ದಾಂತ್ ಶೆಟ್ಟಿ(23), ಮಣಿಪಾಲ ಕೆಫೆ ಕಾಫಿ ಡೆ ಬಳಿ ಪೆರಂಪಳ್ಳಿಯ ಪೃಥ್ವಿಶ್ ಶೆಟ್ಟಿ(21) ಎಂಬವರನ್ನು ಸೆನ್ ಪೊಲೀರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅದೇ ರೀತಿ ಅ.19ರಂದು ಬೆಳಗ್ಗೆ ಪಡುಬಿದ್ರಿ ಪೇಟೆಯ ಪಡುಬಿದ್ರಿ -ಕಾರ್ಕಳ ಜಂಕ್ಷನ್ ಬಳಿ ಹೆಜಮಾಡಿಯ ಗಾಂಜಾ ಸೇವನೆ ಮಾಡಿದ್ದ ಕೀತ್ ಗ್ಯಾಬ್ರಿಯಲ್ ಪುಟಾರ್ಡೋ(25) ಹಾಗೂ ರಾಯನ್ ಬ್ಯಾಪ್ಟಿಸ್ಟ ಮೆಂಡೋನ್ಸಾ (25) ಎಂಬವರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply

  Subscribe  
Notify of