ಉಡುಪಿ ಜಿಲ್ಲಾ ಪತ್ರಕರ್ತರ ವಾರ್ಷಿಕ ಕ್ರಿಕೆಟ್ ಪಂದ್ಯಾಟ – ಮೀಡಿಯಾ ಇಲೆವನ್ ತಂಡಕ್ಕೆ ರೋಚಕ ಜಯ

Spread the love

ಉಡುಪಿ ಜಿಲ್ಲಾ ಪತ್ರಕರ್ತರ ವಾರ್ಷಿಕ ಕ್ರಿಕೆಟ್ ಪಂದ್ಯಾಟ – ಮೀಡಿಯಾ ಇಲೆವನ್ ತಂಡಕ್ಕೆ ರೋಚಕ ಜಯ

ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟವು ನಗರದ ಎಂಜಿಎಂ ಕ್ರೀಡಾಂಗಣದಲ್ಲಿ ಗುರುವಾರ ಜರಗಿತು.

ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಅವರು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಸಹ ಕಾರ್ಯದರ್ಶಿ ಮೈಕಲ್ ರೊಡ್ರಿಗಸ್, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೆಚ್ಚಾರ್, ಉಡುಪಿ ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್, ಸಹಸಂಚಾಲಕ ಅನೀಶ್ ಡಿಸೋಜ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ, ಪ್ರಧಾನ ಕಾರ್ಯದರ್ಶಿ ಕರುಣಾಕರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಮೀಡಿಯಾ ಇಲೆವೆನ್, ಉಡುಪಿ ಪ್ರಿಂಟ್ ಮೀಡಿಯಾ ಇಲೆವೆನ್ ಹಾಗೂ ಕಾಪು ತಾಲೂಕು ಪತ್ರಕರ್ತರ ಸಂಘ ಒಟ್ಟು ಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಮೀಡಿಯಾ ಇಲೆವೆನ್ ತಂಡ ಆರು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಗಳಿಸಿ ಪ್ರಿಂಟ್ ಮೀಡಿಯಾ ಇಲೆವೆನ್ ತಂಡಕ್ಕೆ 64 ರನ್ ಗಳ ಗುರಿಯನ್ನು ನೀಡಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಪ್ರಿಂಟ್ ಮೀಡಿಯಾ ತಂಡ ಆರು ಓವರ್ ಗಳಲ್ಲಿ ಮೂರ ವಿಕೆಟ್ಗಳನ್ನು ಕಳೆದುಕೊಂಡು 62 ರನ್ ಗಳಿಸಿತು. ಪಂದ್ಯದ ಕೊನೆಯಲ್ಲಿ ಮೀಡಿಯಾ ಇಲೆವೆನ್ ತಂಡ ಒಂದು ರನ್ನಿನ ರೋಚಕ ಜಯ ಗಳಿಸಿತು.

ರಾಘವೇಂದ್ರ ಮತ್ತು ಗುರು ಅವರು ಅಂಪೈರ್ ಆಗಿ ಸಹಕರಿಸಿದರು.


Spread the love