ಉಡುಪಿ ಜಿಲ್ಲೆಗೆ ಇನ್ಪೋಸಿಸ್ ನಿಂದ 2 ನೇ ಹಂತದಲ್ಲಿ 28.75 ಲಕ್ಷದ ನೆರವು

Spread the love

ಉಡುಪಿ ಜಿಲ್ಲೆಗೆ ಇನ್ಪೋಸಿಸ್ ನಿಂದ 2 ನೇ ಹಂತದಲ್ಲಿ 28.75 ಲಕ್ಷದ ನೆರವು

ಉಡುಪಿ : ಕೋವಿಡ್-19 ವಿರುದ್ದ ಕಾರ್ಯದಲ್ಲಿ ನೆರವಾಗಲು ಉಡುಪಿ ಜಿಲ್ಲೆಗೆ ಈಗಾಗಲೇ ಇನ್ಪೋಸಿಸ್ ಫೌಂಡೇಶನ್ ವತಿಯಿಂದ 50 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಮುಂದುವರೆದು ಜಿಲ್ಲೆಗೆ 2 ನೇ ಹಂತದಲ್ಲಿ ,ರೂ.28,75,320 ಮೌಲ್ಯದ , ಗ್ಲೌವ್ಸ್, ಎನ್95 ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಪಿಪಿಇ ಕಿಟ್ ಗಳನ್ನು ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಜಿಲ್ಲೆಗೆ ಕೋವಿಡ್ ಕಾರ್ಯಾಚರಣೆಯ ಸಂದರ್ಭದಲ್ಲಿ, ವೈದ್ಯಕೀಯ ಸಲಕರಣೆಗಳು ಅಭಾವವಿರುವ ಸಂದರ್ಭದಲ್ಲಿ ,ಜಿಲ್ಲಾಡಳಿತ ಮನವಿಗೆ ತುರ್ತಾಗಿ ಸ್ಪಂದಿಸಿ, ವೈದ್ಯಕೀಯ ಪರಿಕರಗಳನ್ನು ನೀಡಿರುವ ಇನ್ಪೋಸಿಸ್ ಫೌಂಡೇಶನ್ ನ ಅಧ್ಯಕ್ಷರಾದ ಸುಧಾಮೂರ್ತಿ ಅವರಿಗೆ ಜಿಲ್ಲಾಡಳಿತದ ಮೂಲಕ ಜಿಲ್ಲಾಧಿಕಾರಿ ಜಿ.ಜಗದೀಶ್ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಈ ಸಾಮಾಗ್ರಿಗಳನ್ನು ನೀಡಲು ಸಹಕರಿಸಿದ ಫೌಂಡೇಶನ್ ನ ಡಾ.ರಾಮದಾಸ್ ಕಾಮತ್ ಅವರಿಗೂ ಜಿಲ್ಲಾಡಳಿತ ಅಭಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love