ಉಡುಪಿ ಜಿಲ್ಲೆಯಲ್ಲಿ ಮತ್ತೆ 13 ಕೊರೋನಾ ಪಾಸಿಟಿವ್ ಪ್ರಕರಣ ದೃಢ

Spread the love

ಉಡುಪಿ ಜಿಲ್ಲೆಯಲ್ಲಿ ಮತ್ತೆ 13 ಕೊರೋನಾ ಪಾಸಿಟಿವ್ ಪ್ರಕರಣ ದೃಢ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ 13 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ.

ಶನಿವಾರ ಸಂಜೆ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಪ್ರಕಾರ ಉಡುಪಿಯಲ್ಲಿ13 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆ 177 ಕ್ಕೆ ಏರಿಕೆ ಆಗಿದೆ.

ಕ್ವಾರಂಟೈನ್ ಸೆಂಟರಿಂದ ಮನೆಗೆ ಹೋದವರಲ್ಲಿ ಸೋಂಕು ಧೃಡವಾಗಿದ್ದು ಇದರಲ್ಲಿ 10 ಪುರುಷ, ಎರಡು ಮಕ್ಕಳು, ಓರ್ವ ಮಹಿಳೆಗೆ ಕೋವಿಡ್19 ಪಾಸಿಟಿವ್ ಪತ್ತೆಯಾಗಿದೆ. ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ಮಹಾರಾಷ್ಟ್ರ ದಿಂದ ಬಂದ 12, ತೆಲಂಗಾಣ ದಿಂದ ಬಂದ ಓರ್ವರಲ್ಲಿ ಸೋಂಕು ದೃಢವಾಗಿದ್ದು 13 ಸೋಂಕಿತರ ಮನೆ ಆಸುಪಾಸು ಕಂಟೈನ್ಮೆಂಟ್ ಮಾಡುವ ಸಾಧ್ಯತೆ ಇದೆ. ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.


Spread the love