ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಹಾವಳಿ; ಭಾನುವಾರ 45 ಮಂದಿಗೆ ಕೋರೋನಾ ಪಾಸಿಟಿವ್

Spread the love

ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಹಾವಳಿ; ಭಾನುವಾರ 45 ಮಂದಿಗೆ ಕೋರೋನಾ ಪಾಸಿಟಿವ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕೊರೋನಾ ಹಾವಳಿ ಹೆಚ್ಚಿದ್ದು ಒಟ್ಟು 45 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1322 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದ 20, ಚಿತ್ರದುರ್ಗ ಪ್ರಯಾಣಿಸಿದ ಒಬ್ಬರು, ಬೆಂಗಳೂರಿಗೆ ಪ್ರಯಾಣಿಸಿದ ಇಬ್ಬರು ಹಾಗೂ ಪ್ರಾಥಮಿಕ ಸಂಪರ್ಕದಿಂದ 19 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಅಲ್ಲದೆ ರಾಂಡಮ್ ಚೆಕ್ಕಿಂಗ್ ವೇಳೆ 2 ಮಂದಿಗೆ ಸೋಂಕು ದೃಢಗೊಂಡಿದೆ.

ಈ ವರೆಗೆ ಒಟ್ಟು 1136 ರೋಗಿಗಳು ಬಿಡುಗಡೆ ಹೊಂದಿದ್ದು ಸದ್ಯ 183 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.


Spread the love