ಉಡುಪಿ: ಜ. 14: ಕಾಫಿಟೇಬಲ್ ಬುಕ್ ಪಿಕ್ಟೋರಿಯಲ್‍ ಜರ್ನಿ ಟು ಉಡುಪಿ-ಮಣಿಪಾಲ ಲೋಕಾರ್ಪಣೆ

Spread the love

ಉಡುಪಿ:  ಹಿರಿಯಛಾಯಾಚಿತ್ರ ಪತ್ರಕರ್ತಆಸ್ಟ್ರೋ ಮೋಹನ್‍ ಅವರು ಅಂತಾರಾಷ್ಟ್ರೀಯ ಪ್ರವಾಸಿ ತಾಣ ಉಡುಪಿ-ಮಣಿಪಾಲ ನಗರಗಳನ್ನು  ಕುರಿತಾಗಿ ಕಲಾತ್ಮಕವಾಗಿ ರಚಿಸಿದ  192 ಚಿತ್ರಗಳುಳ್ಳ  ಸಂಪುಟ (ಕಾಫಿಟೇಬಲ್ ಬುಕ್ ) ಪಿಕ್ಟೋರಿಯಲ್‍ ಜರ್ನಿ ಟು ಉಡುಪಿ-ಮಣಿಪಾಲ ಜ. 14ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಭೂತರಾಜ ಪ್ರಕಾಶನದ  ಪ್ರವೀಣಾ ಮೋಹನ್ ಇಂದಿಲ್ಲಿ ಜರಗಿದ ಪತ್ರಿಕಾಗೋಷ್ಟಿಯಲ್ಲಿ  ತಿಳಿಸಿದರು.

Astro Mohan

ಚಿತ್ರ ಸಂಪುಟದಲ್ಲಿ ಒಟ್ಟು 11 ಅದ್ಯಾಯಗಳಿವೆ. 10 ಅದ್ಯಾಯಗಳು ಉಡುಪಿ ಪರಂಪರೆ, ಇತಿಹಾಸ, ಜಾನಪದ, ಕೃಷಿ, ಋತುಗಳು, ಹಬ್ಬಗಳು, ಆಹಾರ ಹಾಗೂ ಜೀವನ ಶೈಲಿಯನ್ನು  ಅಭಿವ್ಯಕ್ತಗೊಳಿಸುತ್ತವೆ. ಮಣಿಪಾಲಕ್ಕಾಗಿ ಪ್ರತ್ಯೇಕ ಒಂದು ಅದ್ಯಾಯವನ್ನೇ ಮೀಸಲಾಗಿಡಲಾಗಿದೆ.  30 ಸೆಂ.ಮೀ. ಅಗಲ ಮತ್ತು 28 ಸೆಂ.ಮೀ. ಉದ್ದದ ಲ್ಯಾಂಡ್ ಸ್ಕ್ಯಾಪ್ ಶೈಲಿಯ ಈ ಪುಸ್ತಕದಲ್ಲಿ ಎಲ್ಲ ಪುಟಗಳನ್ನು ಆರ್ಟ್ ಶೀಟ್‍ನಲ್ಲಿ ಮುದ್ರಿಸಲಾಗಿದೆ. ಮುಖಪುಟದಲ್ಲಿ ಕರಾವಳಿಯ ಪ್ರಸಿದ್ಧ ಕಂಬಳ ಚಿತ್ರವಿದೆ. ಹಿಂಬದಿ ಪುಟದಲ್ಲಿ ಮಣಿಪಾಲ ವಿ.ವಿ.ಕಟ್ಟಡಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಪುಸ್ತಕವು ವಿಶ್ವಪ್ರಸಿದ್ಧ ಮುದ್ರಣಾಲಾಯ ಮಣಿಪಾಲ ಟೆಕ್ನಾಲಾಜಿಸ್‍ನಲ್ಲಿ ಮುದ್ರಣಗೊಂಡಿದೆ. ಒಂದುಜಿಲ್ಲೆಯ ಕುರಿತಾಗಿ ಬೃಹತ್‍ಚಿತ್ರ ಸಂಪುಟ ಬರುತ್ತಿರುವುದು ಇದೇ ಮೊದಲಬಾರಿಗೆಯಾಗಿದೆ ಎಂದು ಅವರು ಹೇಳಿದರು.

ಚಿತ್ರಗಳ ಬಗ್ಗೆ ವಿವರಣೆ ನೀಡಿದ ಆಸ್ಟ್ರೋ ಮೋಹನ್,  ನಾಲ್ಕು ವರ್ಷಗಳ ಹಿಂದೆ ಕೇವಲ ಉಡುಪಿಯ ಕುರಿತಾಗಿ ಹೊರತಂದ ಮಿನೇಚರ್‍ ಕಾಫಿಟೇಬ್ ಬುಕ್‍ ಗಿಂತಲೂ ಇದು ನಾಲ್ಕು ಪಟ್ಟು ದೊಡ್ಡದಾಗಿದೆ. ಅಂದು 132 ಚಿತ್ರಗಳಿದ್ದರೆ ಇಂದು 192 ಚಿತ್ರಗಳಿವೆ. ಈ ಬಾರಿ ಚಿತ್ರ ವಿವರಣೆಯನ್ನು ಸಂಕ್ಷಿಪ್ತವಾಗಿ ಕನ್ನಡ ಭಾಷೆಯಲ್ಲೂ ನೀಡಲಾಗಿದೆ. ಪುಸ್ತಕದಲ್ಲಿರುವ ಅನೇಕ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವುಗಳಾಗಿವೆ  ಎಂದು ಮಾಹಿತಿ ನೀಡಿದರು.

Leaflet_approval

ಕಲಾ ವಿಮರ್ಶಕ ಹಾಗೂ ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಮುನ್ನುಡಿಯನ್ನು ಬರೆದಿದ್ದಾರೆ. ಧಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣಡಾ|| ಡಿ. ವೀರೇಂದ್ರ ಹೆಗ್ಗಡೆ ಅವರು ಶುಭಾಶಯ ಪತ್ರ ಹಾಗೂ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ|| ಸಂಧ್ಯಾಎಸ್ ಪೈ ಅವರು ಕೃತಿ ಮತ್ತು ಕೃತಿಕಾರರ ಕುರಿತಾಗಿ ಬರೆದಿದ್ದಾರೆ.

ಜ. 14ರಂದು ಉಡುಪಿ ಕಿದಿಯೂರು ಹೊಟೇಲಿನ ಪವನ್‍ರೂಫ್‍ ಟಾಪ್‍ನಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾಕರಂದ್ಲಾಜೆ ಲೋಕಾರ್ಪಣೆ ಮಾಡಲಿದ್ದಾರೆ. ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅನುಗ್ರಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಪುಸ್ತಕಕ್ಕೆ ಸಹಕರಿಸಿದವರನ್ನು ಗೌರವಿಸಲಿದ್ದಾರೆ,  ಮಣಿಪಾಲ ವಿ.ವಿ.ಯ ಸಹ ಕುಲಾಧಿಪತಿಡಾ| ಎಚ್.ಎಸ್. ಬಲ್ಲಾಳ್ ಪ್ರಥಮಗ್ರಾಹಕರಿಗೆ ಪುಸ್ತಕವನ್ನು ಹಸ್ತಾಂತರ ಮಾಡಲಿದ್ದಾರೆ. ಮಣಿಪಾಲ ಗ್ರೂಪ್‍ನಎಂಡಿ ಟಿ. ಗೌತಮ್ ಪೈ, ಉಡುಪಿ ಜಿಲ್ಲಾ  ಪೋಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಶುಭಕೋರಲಿದ್ದಾರೆ ಎಂದು ಅವರು  ಮಾಹಿತಿ ನೀಡಿದರು.

Leaflet_approval

ಪ್ರತಿಗಳು ಜ. 14ರಿಂದ ನವ ಕರ್ನಾಟಕ ಪಬ್ಲಿಕೇಶನ್ನಿನ ಎಲ್ಲ ಶಾಖೆಗಳಲ್ಲಿ ,  ಬುಕ್‍ಮಾರ್ಕ್, ಉಡುಪಿ ರಥ ಬೀದಿಯಲ್ಲಿರುವ ನಂದಿತಾ ಫ್ರೇಗ್ರಾನ್ಸ್, ಲಿಟ್ಲ್ ಪೈ ನೀಲಗಿರಿಸ ಹಾಗೂ ಸೀತಾ ಬುಕ್ ಸೆಂಟರ್‍ಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಪ್ರತಿಗಳು ಲಭ್ಯತೆಯಕುರಿತು ವಿವರ ನೀಡಿದರು.


Spread the love