ಉಡುಪಿ: ಧಾರಾಕಾರ ಮಳೆಗೆ ಹಾನಿ- ನೋಡೆಲ್‌ ಅಧಿಕಾರಿಗಳ ನೇಮಕ

Spread the love

ಉಡುಪಿ: ಧಾರಾಕಾರ ಮಳೆಗೆ ಹಾನಿ- ನೋಡೆಲ್‌ ಅಧಿಕಾರಿಗಳ ನೇಮಕ

 ಉಡುಪಿ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಿಂಚು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಗಾಳೆ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಹಾಗೂ ತೀವ್ರ ಕಡಲ್ಕೊರೆತ ಉಂಟಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಇದೇರೀತಿ ಮಳೆ ಮುಂದುವರಿಯುವ ಸೂಚನೆಯಿದ್ದು, ಮಳೆಯಿಂದಾಗುವ ವಿಕೋಪ, ಹಾನಿಗಳನ್ನು ನಿಭಾಯಿಸುವ ಸಂಬಂಧ ಹಾಗೂ ಹಾನಿಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಮಾಡುವ ಸಲುವಾಗಿ ಪ್ರತಿ ತಾಲ್ಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಉಡುಪಿ–ಮೋಹನ್ ರಾಜ್ 94808 78110, ಕಾಪು– ಶೀನ ನಾಯ್ಕ 94809 79798, ಬ್ರಹ್ಮಾವರ– ಶಿವಕುಮಾರ್ 94808 23054, ಬ್ರಹ್ಮಾವರ ಕೋಟ– ಉಮಾಶಂಕರ್ 94491 01987, ಕುಂದಾಪುರ– ಕಿರಣ್ ಪಟ್ನೇಕರ್ 94808 78105, ಕುಂದಾಪುರ ವಂಡ್ಸೆ– ಸಂಜೀವ ನಾಯ್ಕ 99005 65469, ಬೈಂದೂರು– ರಾಜ್ ಕುಮಾರ್ 98452 54782, ಕಾರ್ಕಳ– ಕೆ.ವಿ.ಹರ್ಷ 94808 78100, ಹೆಬ್ರಿ– ಜಯರಾಜ್ ಪ್ರಕಾಶ್ 82779 32505 ಅವರನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.


Spread the love