ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ

Spread the love

ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ

ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ವರ್ಷಾಚರಣೆಯ ಪ್ರಯುಕ್ತ  ಎಮ್.ಜೆ.ಸಿ ಮೈದಾನದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮಟ್ಟದ ಹೊನಲು ಬೆಳಕು ಕಬಡ್ಡಿ ಪಂದ್ಯಾಟ ಸಂದರ್ಭದಲ್ಲಿ ಸಹಾಯವನ್ನು ಯಾಚಿ ಬಂದ ಶಿವಮೊಗ್ಗದ ನಿವಾಸಿಯಾದ ಮುಸ್ಲಿಂ ಮಹಿಳೆ ಶಹೀನ ತನ್ನ 11 ವರ್ಷದ ಮಗಳಾದ ಕುಮಾರಿ ಮೆಹೆಕ್ ಮಣಿಪಾಲದ ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದಕ್ಕೆ ಸುಮಾರು 11 ಲಕ್ಷ ಖರ್ಚು ತಗಲುವಾಗಿ ವೈದ್ಯರ ಶಿಫಾರಸು ಪತ್ರ ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಪತ್ರಿಕೆಯ ಪ್ರತಿಯನ್ನು ತೋರಿಸಿ ಆ ಕಾರ್ಯಕ್ರಮದ ಜನರಲ್ಲಿ ಸಹಾಯವನ್ನು ಯಾಚುತ್ತಿದ್ದರು. ಅದನ್ನು ಗಮನಿಸಿದ ಜಿಲ್ಲಾ ಯುವ ಮೋರ್ಚಾ ತಂಡ ಕಾರ್ಯಕರ್ತರಿಂದ ಸುಮಾರು 17000/- ರೂಪಾಯಿಗಳನ್ನು ಸಂಗ್ರಹಿಸಿ ಆ ಕುಟುಂಬದ ಸಹಾಯಕ್ಕೆ ನಿಂತಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಲ್ಯಾಡಿ ಸುರೇಶ್ ನಾಯಕ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಪ್ರವೀಣ್ ಪೂಜಾರಿ ಕಾಪು, ಹರೀಶ್ ಪೂಜಾರಿ ಪರ್ಕಳ, ಸಂತೋಷ್ ಮೂಡುಬೆಳ್ಳೆ, ಸಚಿನ್ ಬೊಲ್ಜೆ, ಮೋಹನ್ ಉಪಾಧ್ಯ, ವೆನಿಲ್ಲಾ ಅಬೂಬಕ್ಕರ್ ಆತ್ರಾಡಿ, ಸತೀಶ್ ಉದ್ಯಾವರ, ಸಲೀಂ ಅಂಬಾಗಿಲು ಹಾಗೂ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love