ಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣ ವಿಚಾರಣೆ ಮೇ 26ಕ್ಕೆ ಮುಂದೂಡಿಕೆ

Spread the love

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಲಾಗಿದೆ.

ಕಳೆದ ಬಾರಿ (ಏ.16)ರಂದು ನಡೆದ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಆರೋಪಿಗಳ ಪರ ಸಾಕ್ಷಿ ಹೇಳಲು ಸಾಕ್ಷಿದಾರರಿದ್ದು, ಅವರನ್ನು ಹಾಜರುಪಡಿಸುವುದಾಗಿ ತಿಳಿಸಿದ್ದರು. ಆದರೆ ಶುಕ್ರವಾರ ಆರೋಪಿಗಳ ಪರ ನಾಲ್ವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರಾದರೂ ಆರೋಪಿಗಳ ಪರ ವಕೀಲರೇ ಸಾಕ್ಷಿದಾರರ ವಿಚಾರಣೆ ಬೇಡ ಎಂದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದರು. ವಿಚಾರಣೆ ವೇಳೆ ಸರ್ಕಾರಿ ವಕೀಲ ಪಿ.ಎಸ್. ಜಿತ್ತೂರಿ ಉಪಸ್ಥಿತರಿದ್ದರು.


Spread the love