ಉಡುಪಿ: ಮೊಬೈಲ್ ಅಂಗಡಿ ಕಳ್ಳತನ ; ಅಂತರ್ ರಾಜ್ಯ ಮೂವರು ಕಳ್ಳರ ಬಂಧನ

ಉಡುಪಿ: ಮೊಬೈಲ್ ಅಂಗಡಿ ಕಳ್ಳತನ ; ಅಂತರ್ ರಾಜ್ಯ ಮೂವರು ಕಳ್ಳರ ಬಂಧನ

ಉಡುಪಿ: ಮೊಬೈಲ್ ಅಂಗಡಿಯಿಂದ ಮೊಬೈಲ್ ಕಳ್ಳತನ ಮಾಡಿದ ಅಂತರ್ ರಾಜ್ಯ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಡಿಸೆಂಬರ್ 1 ರಂದು ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ರಜಾಕ್ ಅಸ್ಲಾಂ ಮುಜಾವರ್ (20), ಕೊಪ್ಪಳ ಜಿಲ್ಲೆಯ ರಾಜಾಸಾಬ್ ನಾಯಕ್, (25), ಮತ್ತು ಬಿಹಾರದ ದೀಪಕ್ ಪ್ರಸಾದ್ ಎಂದು ಗುರುತಿಸಲಾಗಿದೆ.

ನವೆಂಬರ್ 5 ರಂದು ರಾತ್ರಿ ಉಡುಪಿ ನಗರದ ತ್ರೀವೇಣಿ ಜಂಕ್ಷನ್ ಬಳಿ ಇರುವ ಪ್ಲೇ ಜೋನ್ ಎಂಬ ಮೊಬೈಲ್ ಅಂಗಡಿಯಿಂದ ಸುಮಾರು ರೂ. 8,34,990/- ಬೆಲೆಬಾಳುವ ಮೊಬೈಲ್ ಪೋನ್ಗಳು ಹಾಗೂ ನಗದು ಕಳವಾಗಿದ್ದು ಆರೋಪಿಗಳನ್ನು ಡಿಸೆಂಬರ್ 1ರಂದು ಬಂಧಿಸಿದ್ದು ಬಂಧಿತರಿಂದ ಅಂದಾಜು ರೂ. 3,00,000/- ಮೌಲ್ಯದ 16 ಮೊಬೈಲ್ಗಳು, ನಗದು ರೂ. 22,000/- ಹಾಗೂ ಕಳವಿಗೆ ಉಯೋಗಿಸಿದ ಒಂದು ಕಬ್ಬಿಣದ ಸ್ಕ್ರೂ ಡ್ರೈವರ್, ಒಂದು ಕಟ್ಟಿಂಗ್ ಪ್ಲೇರ್, ಬೆನ್ನಿಗೆ ಹಾಕುವ ಎರಡು ಬ್ಯಾಗ್, ಮೂಗಿಗೆ ಕಟ್ಟುವ ಒಂದು ಮಾಸ್ಕ್, ತಲೆಗೆ ಹಾಕುವ ಬಟ್ಟೆಯ ಕ್ಯಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ನಿಶಾ ಜೇಮ್ಸ್, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ರವರ ಆದೇಶದಂತೆ ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಟಿ.ಆರ್ ಜೈಶಂಕರ್, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಮಲ್ಪೆ ಠಾಣಾ ಪಿ.ಎಸ್.ಐ ತಿಮ್ಮೇಶ್, ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಡೆ ಡಿಸಿಐಬಿ, ರಾಘವೇಂದ್ರ ಡಿಸಿಐಬಿ, ಉಡುಪಿ ನಗರ ಠಾಣೆಯ ಲೋಕೇಶ್, ಬಾಲಕೃಷ್ಣ, ಇಮ್ರಾನ್, ಸಂತೋಷ್ ರಾಥೋಡ್ ರವರು ಭಾಗವಹಸಿದ್ದರು.