ಉಡುಪಿ: ರೈಲಲ್ಲಿ 6.50 ಲಕ್ಷ ವೌಲ್ಯದ ಚಿನ್ನಾಭರಣ ಕಳವು

Spread the love

ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಕೊಡವೂರಿನ ಪ್ರಮೋದ್ ಶೆಟ್ಟಿ ಅವರ ಬ್ಯಾಗ್‌ನಿಂದ 6.50 ಲಕ್ಷ ರೂ. ವೌಲ್ಯದ 279 ಗ್ರಾಂ. ಚಿನ್ನಾಭರಣ ಕಳವಾಗಿದೆ.

ಮೇ 17ರಂದು ರೈಲನ್ನೇರಿ ಮೇ 18ರಂದು ಉಡುಪಿ ರೈಲು ನಿಲ್ದಾಣವೆಂದು ತಿಳಿದು ಬಾರ್ಕೂರು ರೈಲು ನಿಲ್ದಾಣದಲ್ಲಿ ಎಲ್ಲ ಲಗೇಜ್‌ಗಳೊಂದಿಗೆ ಬೆಳಗ್ಗೆ ಇಳಿದಿದ್ದರು. ತಕ್ಷಣ ಅರಿವಾಗಿ ರೈಲನ್ನೇರಿದ್ದರು.

ಈ ಸಂದರ್ಭ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 4ಮಂದಿ ಅಪರಿಚಿತರು ಪ್ರಮೋದ್ ಶೆಟ್ಟಿ ಬ್ಯಾಗ್‌ಗಳನ್ನು ಎತ್ತಿ ರೈಲಿನೊಳಗೆ ಹಾಕಿದ್ದು, ಒಬ್ಬಾತ ಕೆಂಪು ಬಣ್ಣದ ಬ್ಯಾಗಿನ ಬಳಿ ನಿಂತಿದ್ದ. ನಂತರ ಪ್ರಮೋದ್ ಉಡುಪಿಯಲ್ಲಿಳಿದು ಮನೆಗೆ ತೆರಳಿದ್ದರು.

ಮನೆಯಲ್ಲಿ ಕೆಂಪು ಬಣ್ಣದ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗಿನ ಒಂದು ಬದಿ ಕತ್ತರಿಸಿ ಒಳಗಿದ್ದ ಚಿನ್ನಾಭರಣ ಕಳವು ಮಾಡಿದ್ದು ಬೆಳಕಿಗೆ ಬಂತು. ಗುರುವಾರ ಮಣಿಪಾಲ ಪೊಲೀಸ್ ಠಾಣೆಗೆ ನೀಡಿದ ದೂರು ದಾಖಲಾಗಿದೆ.


Spread the love