ಉಡುಪಿ: ರೈಲಿನಲ್ಲಿ ಗಂಡು ಮಗುವಿಗೆ ಜನನ

Spread the love

ಉಡುಪಿ: ಕಾರವಾರದಿಂದ ಉಡುಪಿಗೆ ತಮ್ಮ ಭಾವನನ್ನು ಭೇಟಿಗೆ ಬಂದ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲಿ ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

birth_train-002

ಕಾರಾವಾರದಿಂದ ಉಡುಪಿಗೆ ಆಸ್ಪತ್ರೆಯಲ್ಲಿರುವ ತಮ್ಮ ಭಾವನನ್ನು ಭೇಟಿ ಮಾಡಲು ಕಾರವಾರದಿಂದ ಬರುತ್ತಿದ್ದ ವಿಜಯ (34) ಮಹಿಳೆಗೆ ರೈಲಿನಲ್ಲಿ ಆಕಸ್ಮಿಕವಾಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ಮಹಿಳಾ ಶೌಚಾಲಯಕ್ಕೆ ತೆರಳಿದ್ದು ಅಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೈಲಿನಲ್ಲಿನ ಸಹಪ್ರಯಾಣಿಕರು ಇದನ್ನು ಗಮನಿಸಿ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ತಿಳಿಸಿದ್ದು ಕೂಡಲೇ 108 ಅಂಬುಲೆನ್ಸ್ ಮೂಲಕ ಉಡುಪಿಯ ತಾಯಿ ಮತ್ತು ಮಗು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆಮೂಲಗಳು ತಿಳಿಸಿವೆ.


Spread the love