ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಜಿಮ್ ವರ್ಕೌಟ್ ಆರೋಪ – ನಾಲ್ವರ ವಿರುದ್ದ ಪ್ರಕರಣ ದಾಖಲು

Spread the love

ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಜಿಮ್ ವರ್ಕೌಟ್ ಆರೋಪ – ನಾಲ್ವರ ವಿರುದ್ದ ಪ್ರಕರಣ ದಾಖಲು

ಉಡುಪಿ: ಕೊರೋನಾ ಮಹಾಮಾರಿಯ ವಿರುದ್ದ ಲಾಕ್ ಡೌನ್ ಘೋಷಣೆಯಿದ್ದರೂ ಅದನ್ನು ಉಲ್ಲಂಘಿಸಿ ಸಾಮಾಜಿಕ ಅಂತರವನ್ನು ಪಾಲಿಸದೆ ಜಿಮ್ ಸೆಂಟರ್ ಒಂದರಲ್ಲಿ ವರ್ಕೌಟ್ ಮಾಡಿ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದ ನಾಲ್ವರ ವಿರುದ್ದ ಉಡುಪಿ ತಾಲೂಕ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗಬೆಟ್ಟು ನಿವಾಸಿ ಜುನೈದ್ (20), ಚಿಟ್ಪಾಡಿ ನಿವಾಸಿ ಯತೀನ್ ಪೂಜಾರಿ(26), ಆದಿ ಉಡುಪಿ ನಿವಾಸಿ ಋಷಿಕೇಶ್(21) ಮತ್ತು ಸಂಗನಗೌಡ (20) ಎಂಬವರ ವಿರುದ್ದ ಲಾಕ್ ಡೌನ್ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಾಗಿದೆ.

ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮಹಾಮಾರಿಯಾಗಿ ಹಬ್ಬುತ್ತಿರುವ ಕೋವಿಡ್ 19ರ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕೋರೊನಾ ವೈರಸ್ ಹರಡುವಿಕೆಗೆ ಪೂರಕವಾಗುವ ಸಂಭವವಿರುವ ಸ್ಥಳಗಳಾದ ಸೆಲೂನ್, ಜಿಮ್ ಸೆಂಟರ್, ಪಬ್ ಮುಂತಾದ ಸ್ಥಳಗಳನ್ನು ತೆರೆಯದಂತೆ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದ್ದು, ಈ ಆದೇಶಗಳನ್ನು ಆಯಾ ಉದ್ದಿಮೆದಾರರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಎಸ್ ಮಂಗಳವಾರ ಬೆಳಿಗ್ಗೆ ಉಡುಪಿ ಪರಿವಾರ್ ಸ್ವೀಟ್ಸ್ ಬಳಿಯ ಆಕ್ಸಿ ಜಿಮ್ ತೆರಳಿದ್ದು ಈ ವೇಳೆ ನಾಲ್ವರು ಯಾವುದೇ ಸಾರ್ವಜನಿಕ ಅಂತರ ಹಾಗೂ ಸುರಕ್ಷಾ ಕ್ರಮವನ್ನು ತೆಗೆದುಕೊಳ್ಳದೇ ಜೀಮ್ ಕಸರತ್ತು ನಡೆಸುತ್ತಿದ್ದು ಜಿಮ್ ನಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ಗಳನ್ನು ಉಪಯೋಗಿಸದೇ ಕಾನೂನಿನ ಉಲ್ಲಂಘನೆ ಮಾಡಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಹಶೀಲ್ದಾರ್ ಅವರ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಕಲಂ 188,269 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love