ಉಡುಪಿ : ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ಪೌರಾಯುಕ್ತರ ಸೂಚನೆ

Spread the love

ಉಡುಪಿ : ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ಪೌರಾಯುಕ್ತರ ಸೂಚನೆ
 

ಉಡುಪಿ: ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಸಾಕು ನಾಯಿಗಳನ್ನು ಹೊರಗೆ ಬಿಡದೇ ಮನೆಯಲ್ಲಿ ಕಟ್ಟಿ ಹಾಕಿ ಸಾಕ ಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ನಾಯಿಗಳನ್ನು ಬಿಡದೇ ಸಂರಕ್ಷಣೆ ಮಾಡುವುದು ಸಾಕುವವರ ಆದ್ಯ ಕರ್ತವ್ಯವಾಗಿದೆ.

ಸಾಕುನಾಯಿ ಮರಿಗಳನ್ನು ರಸ್ತೆಯಲ್ಲಿ ಬಿಡುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬಂದಿದ್ದು, ಸಾಕುನಾಯಿಗಳಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಅವುಗಳಿಗೆ ಕಾಲಕಾಲಕ್ಕೆ ವ್ಯಾಕ್ಸಿನ್ ಹಾಕಿಸುವುದು ಮಾಲಕರ ಜವಾಬ್ದಾರಿಯಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿ, ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮನೆಯ ಮಾಲಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love